ಫಿಲೋಮಿನಾದಲ್ಲಿ ಮಂಗಳೂರು ವಿವಿ ಪುರುಷರ ಅಂತರ್-ಕಾಲೇಜು ಲೆದರ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳೂರು ವಲಯ ಅಂತರ್-ಕಾಲೇಜು ಪುರುಷರ ಲೆದರ್ ಬಾಲ್ ಮ್ಯಾಟ್ ಕ್ರಿಕೆಟ್ ಟೂರ್ನಮೆಂಟ್ “ಶ್ರೀ ಮೂಲ್ಕಿ ದಯಾನಂದ್ ಕಾಮತ್ ರೋಲಿಂಗ್ ಟ್ರೋಫಿ”ಗೆ ಡಿ.1 ರಂದು ಚಾಲನೆ ದೊರೆತಿದೆ.


30 ತಂಡಗಳು ಕಣಕ್ಕೆ:
ಮಂಗಳೂರು ವಲಯದ ಒಟ್ಟು 30 ಕಾಲೇಜು ತಂಡಗಳು ಕಣದಲ್ಲಿದ್ದು, ತಂಡಗಳನ್ನು `ಎ’ ಹಾಗೂ `ಬಿ’ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. `ಎ’ ವಿಭಾಗದಲ್ಲಿ ಎಸ್‌ಡಿಎಂಬಿಬಿಎಂ ಮಂಗಳೂರು, ರೋಶನಿ ನಿಲಯ ಮಂಗಳೂರು, ವಿವೇಕಾನಂದ ಪುತ್ತೂರು, ಸೈಂಟ್ ಆಗ್ನೇಸ್ ಮಂಗಳೂರು, ಸರಕಾರಿ ಪದವಿ ಕಾಲೇಜು ಉಪ್ಪಿನಂಗಡಿ, ಸರಕಾರಿ ಪದವಿ ಕಾಲೇಜು ಬೆಟ್ಟಂಪಾಡಿ, ಸರಕಾರಿ ಪದವಿ ಕಾಲೇಜು ವಾಮದಪದವು, ಯೂನಿವರ್ಸಿಟಿ ಕಾಲೇಜು ಮಂಗಳೂರು, ಯೂನಿವರ್ಸಿಟಿ ಕಾಲೇಜು ನೆಲ್ಯಾಡಿ, ಸರಕಾರಿ ಪದವಿ ಕಾಲೇಜು ಪೂಂಜಾಲಕಟ್ಟೆ, ಸರಕಾರಿ ಪದವಿ ಕಾಲೇಜು ಬೆಳ್ತಂಗಡಿ, ಸರಕಾರಿ ಪದವಿ ಕಾಲೇಜು ಮುಡಿಪು, ಕೆನರಾ ಕಾಲೇಜು ಮಂಗಳೂರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, `ಬಿ’ ವಿಭಾಗದಲ್ಲಿ ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರು, ಯೂನಿವರ್ಸಿಟಿ ಕ್ಯಾಂಪಸ್ ಕೊಣಾಜೆ, ವಿದ್ಯಾರಶ್ಮಿ ಸವಣೂರು, ಸೈಂಟ್ ಆನ್ಸ್ ಕಾಲೇಜು ವಿರಾಜಪೇಟೆ, ಸರಕಾರಿ ಪದವಿ ಕಾಲೇಜು ಕಾರ್‌ಸ್ಟ್ರೀಟ್ ಮಂಗಳೂರು, ಪದುವಾ ಕಾಲೇಜು ಮಂಗಳೂರು, ಸರಕಾರಿ ಪದವಿ ಕಾಲೇಜು ಕುಶಾಲನಗರ, ಶ್ರೀ ನಾರಾಯಣ ಗುರು ಮಂಗಳೂರು, ಎಸ್‌ಡಿಎಂ ಕಾಲೇಜು ಉಜಿರೆ, ಗೋವಿಂದದಾಸ್ ಕಾಲೇಜು ಮಂಗಳೂರು, ಶ್ರೀ ರಾಮಕುಂಜೇಶ್ವರ ಕಾಲೇಜು ರಾಮಕುಂಜ, ಎನ್‌ಎಂಸಿ ಸುಳ್ಯ, ಎಫ್‌ಎಂಕೆಎಂಸಿ ಮಡಿಕೇರಿ, ಸರಕಾರಿ ಪದವಿ ಕಾಲೇಜು ಮಂಗಳೂರು, ಸೈಂಟ್ ಅಲೋಶಿಯಸ್ ಮಂಗಳೂರು ಹೀಗೆ ೩೦ ತಂಡಗಳು ಕಣದಲ್ಲಿದೆ.

ಚಾಲನೆ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯ, ಉಪ್ಪಿನಂಗಡಿ ಸರಕಾರಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕೂಡಮರ, ವಿರಾಜಪೇಟೆ ಸೈಂಟ್ ಆನ್ಸ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಜಿನೀಶ್‌ರವರು ಉಪಸ್ಥಿತರಿದ್ದರು.

ಫಿಲೋಮಿನಾ ಕಾಲೇಜು ನೇರವಾಗಿ ಕ್ವಾರ್ಟರ್ ಫೈನಲಿಗೆ..
ಬೆಳಿಗ್ಗೆ `ಎ’ ವಿಭಾಗದಲ್ಲಿನ ಸರಕಾರಿ ಪದವಿ ಕಾಲೇಜು ಉಪ್ಪಿನಂಗಡಿ ಹಾಗೂ ಸರಕಾರಿ ಪದವಿ ಕಾಲೇಜು ಬೆಟ್ಟಂಪಾಡಿ ನಡುವೆ ನಡೆದ ಟೂರ್ನಿಯ ಪ್ರಥಮ ಪಂದ್ಯಾಟದಲ್ಲಿ ಉಪ್ಪಿನಂಗಡಿ ಕಾಲೇಜು ಹಾಗೂ ಅಪರಾಹ್ನ `ಬಿ’ ವಿಭಾಗದಲ್ಲಿನ ವಿದ್ಯಾರಶ್ಮಿ ಸವಣೂರು ಹಾಗೂ ಸೈಂಟ್ ಆನ್ಸ್ ಕಾಲೇಜು ವಿರಾಜಪೇಟೆ ನಡುವೆ ಜರಗಿದ ಪಂದ್ಯಾಟದಲ್ಲಿ ಸವಣೂರು ವಿದ್ಯಾರಶ್ಮಿ ಕಾಲೇಜು ತಂಡವು ವಿಜಯಿಯಾಗಿ ಶುಭಾರಂಭ ಪಡೆದಿದೆ. `ಎ’ ವಿಭಾಗದಲ್ಲಿ ಸ್ಥಾನ ಪಡೆದ ಫಿಲೋಮಿನಾ ಕಾಲೇಜು ತಂಡವು ಕಳೆದ ವರ್ಷ ನಡೆದ ಟೂರ್ನಮೆಂಟಿನಲ್ಲಿ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಕಾರಣ ಈ ಬಾರಿ ನೇರವಾಗಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಪಡೆದಿದ್ದು, ಡಿಸೆಂಬರ್ 10ರ ಬಳಿಕ ಪ್ರಥಮ ಪಂದ್ಯವನ್ನು ಆಡಲಿದೆ.

LEAVE A REPLY

Please enter your comment!
Please enter your name here