ಮಾಸ್ಟರ್ ಅಥ್ಲೇಟಿಕ್‌ನಲ್ಲಿ ಕಾಣಿಯೂರಿನ ಪೆರ್ಲೋಡಿ ಸುಶೀಲ ರಾಜ್ಯ ಮಟ್ಟಕ್ಕೆ

0

ಕಾಣಿಯೂರು: ದ.ಕ ಮಾಸ್ಟರ್ ಅಥ್ಲೇಟಿಕ್ ಎಸೋಸಿಯೇಷನ್ ಮಂಗಳೂರು ವತಿಯಿಂದ ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ 17 ನೇ ಜಿಲ್ಲಾ ಮಟ್ಟದ ಮಾಸ್ಟರ್ ಅಥ್ಲೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಯೂರು ಗ್ರಾಮದ ಪೆರ್ಲೋಡಿ ಸುಶೀಲರವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

70ರ ವಯೋಮಾನದ ವಿಭಾಗದಲ್ಲಿ ಸುಶೀಲರವರು ಭಾಗವಹಿಸಿದ 3 ಸಾವಿರ ವೇಗ ನಡಿಗೆ, 1500 ಮೀ ಓಟ, 20ಮೀ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿಕೊಂಡು ಬರುತ್ತಿರುವ ಸುಶೀಲರವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here