ಪುತ್ತೂರು: ಸುದಾನ ಸಂಸ್ಥೆಯಲ್ಲಿ 2 ದಿನ ನಡೆಯಲಿರುವ ವಾರ್ಷಿಕ ಕ್ರೀಡಾಕೂಟವು ಡಿ. 1 ರಂದು ವಿಧ್ಯುಕ್ತವಾಗಿ ಉದ್ಧಾಟನೆಗೊಂಡಿತು. ಮುಖ್ಯ ಅತಿಥಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ. ಕಾರ್ಯಪ್ಪ ,ಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್, ಶಾಲಾ ಶೈಕ್ಷಣಿಕ ಸಲಹಾಧಿಕಾರಿ ಡಾ| ಮಾಧವ ಭಟ್, ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್,ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ| ರಾಜೇಶ್ ಬೆಜ್ಜಂಗಳ, ಕೋಶಾಧಿಕಾರಿ ಆಸ್ಕರ್ ಆನಂದ, ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ಸಮಾರಂಭದಲ್ಲಿ ಪಾಲ್ಗೊಂಡರು.
ಮುಖ್ಯ ಅಭ್ಯಾಗತರಾದ ಶ ವಿ. ಪಿ. ಕಾರ್ಯಪ್ಪ ಕ್ರೀಡಾಧ್ವ ಜಾರೋಹಣಗೈದು ಶುಭಹಾರೈಸಿದರು. ಕೀರ್ತಿ, ದೀಪ್ತಿ, ಸ್ಪೂರ್ತಿ ಮತ್ತು ಜ್ಯೋತಿ ತಂಡಗಳ ಶಿಸ್ತಿನ ಪಥ ಸಂಚಲನ ನಡೆಯಿತು. ತಾಲೂಕು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಸುದಾನ ಕ್ರೀಡಾಪಟುಗಳು ಕ್ರೀಡಾಜ್ಯೋತಿ ಬೆಳಗಿಸಿದರು.
ಪ್ರಾರ್ಥನೆಯ ನಂತರ ದೈಹಿಕ ಶಿಕ್ಷಕ ಪುಷ್ಪರಾಜ್‌ಎಲ್ಲರನ್ನು ಸ್ವಾಗತಿಸಿದರು. ಶಾಂತಿಯ ಸಂಕೇತವಾದ ಪಾರಿವಾಳವನ್ನು ಸ್ವತಂತ್ರವಾಗಿ ಹಾರಿಸುವುದರ ಮೂಲಕ ಬೆಳಕು ಚೆಲ್ಲುವ ಹೂ ಕುಂಡ ಹಾಗೂ ಕ್ರೀಡಾ ತಂಡಗಳ ನೃತ್ಯಗಳೊಂದಿಗೆ ವಿಜೃಂಭಣೆಯಿಂದ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಮಂತ್ರಿ ಸತ್ಯ ಪ್ರಸಾದ್ ನಾಯಕ್(10ನೇ)ಪ್ರತಿಜ್ಞಾ ವಿಧಿ ನಡೆಸಿಕೊಟ್ಟು ಶ್ರೇಯಾ(10ನೇ) ವಂದಿಸಿದರು. ಶಿಕ್ಷಕಿ ರೇಖಾ ಹಾಗೂ ಸುವರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ದಿನವಿಡಿ ವಿವಿಧ ಶಿಕ್ಷಕರ ನೇತೃತ್ವದಲ್ಲಿ ನಿಗದಿತ ಆಟೋಟಗಳನ್ನು ನಡೆಸಲಾಗಿತ್ತು. ನಾಳೆ ಸಂಜೆಯವರೆಗೆ ಮುಂದುವರಿಸಲಾಗಿ, ಡಿಸೆಂಬರ್ ೨ ರಂದು ಸಂಜೆ ಸಮಾರೋಪ ಸಮಾರಂಭವುವಿಜಯಕುಮಾರ್, ನಿವೃತ್ತ ಸೈನ್ಯಾಧಿಕಾರಿಯವರ ನೇತೃತ್ವದಲ್ಲಿ ಸಂಪನ್ನಗೊಳ್ಳಲಿದೆ.