ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಿಡೆಕಲ್ಲು ಕಾಲೇಜಿನ ಭವಿಶ್ ಗೆ ಕಂಚಿನ ಪದಕ

0

ಪುತ್ತೂರು : ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ ಎ ವಿದ್ಯಾರ್ಥಿ ಭವಿಶ್ ಇವರು ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಫೆಡರೇಶನ್ ವತಿಯಿಂದ ಎಸ್.ಡಿ.ಎಂ ಕಾಲೇಜು, ಉಜಿರೆ ಆತಿಥ್ಯದಲ್ಲಿ ನ.26 ರಂದು ನಡೆದ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ 49 ಕೆಜಿ ಯುವ ವಿಭಾಗದಲ್ಲಿ ಕಂಚಿನ ಪದಕ ಪಡೆಯುತ್ತಾರೆ. ಇವರು ಸವಣೂರಿನ ಶ್ರೀ ಮಾಧವ ಗೌಡ ಮತ್ತು ಶ್ರೀಮತಿ ಯಮುನಾ ದಂಪತಿ ಪುತ್ರ. ಕಾಲೇಜಿನ ಪ್ರಾಂಶುಪಾಲೆ ನಳಿನಾಕ್ಷಿ, ದೈಹಿಕ ನಿರ್ದೇಶಕ ಶೇಷಪ್ಪಮತ್ತು ಪ್ರಾಧ್ಯಾಪಕ ವೃಂದದವರು ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here