ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27 ರಿಂದ ಆರಂಭಗೊಂಡಿರುವ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞದ 6ನೇ ದಿನವಾದ ಡಿ.3ರಂದು ಪಾರಾಯಣ, ಭಜನೆ, ಪ್ರವಚನ ನಡೆಯಿತು.
ಬೆಳಿಗ್ಗೆ ಕಲಶಾರಾಧನೆ, ಶ್ರೀ ಮದ್ಭಾಗವತ ಪಾರಾಯಣ, ಹಂಸಾಖ್ಯಾನ ಪರ್ಯಂತ, ಶ್ರೀ ಅಷ್ಟಾಕ್ಷರಿ ಮಂತ್ರ ಹವನ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಪಟ್ರಮೆ ವಿಶ್ವಹಿಂದೂ ಪರಿಷತ್ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ಸಂಜೆ ಶ್ರೀ ಮದ್ಭಾಗವತ ಪ್ರವಚನ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ವೇದಮೂರ್ತಿ ವಿದ್ವಾನ್ ಕೆ.ಕೃಷ್ಣಮೂರ್ತಿ ಕಾರಂತ ಪೆರ್ನೆ ಅವರ ಆಚಾರ್ಯತ್ವದಲ್ಲಿ ವಿದ್ವಾನ್ ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ, ಮುರಳಿಕೃಷ್ಣ ಭಟ್ ನಂದಗೋಕುಲ ಆಲಂತಾಯ ಹಾಗೂ ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಕಾಟುಕುಕ್ಕೆರವರು ಪ್ರವಚನ ನೀಡಿದರು. ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಪೆರಣ, ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಅಧ್ಯಕ್ಷ ಓಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರೆಮೇಲು, ಸಮಿತಿ ಪದಾಧಿಕಾರಿಗಳು, ಪೆರಣ ಕುಟುಂಬಸ್ಥರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇಂದು ಸಂಪನ್ನ:
ಕಳೆದ ೬ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಶ್ರೀ ಮದ್ಭಾಗವತ ಪಾರಾಯಣ, ಪ್ರವಚನ ೭ನೇ ದಿನವಾದ ಡಿ.೪ರಂದು ಮಧ್ಯಾಹ್ನದ ವೇಳೆಗೆ ಸಮಾಪ್ತಿಗೊಳ್ಳಲಿದೆ. ಬೆಳಿಗ್ಗೆ ಕಲಶಾರಾಧನೆ, ಪಾರಾಯಣ, ಶ್ರೀ ಗಾಯತ್ರಿ ಯಜ್ಞ, ಮಹಾಮಂಗಳಾರತಿ, ಅವಭೃತ ಸ್ನಾನ, ಮಹಾಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.