ಉಪ್ಪಿನಂಗಡಿ: ಕರ್ನಾಟಕ ಹಾಲು ಮಹಾಮಂಡಳಿಯ ಮೈಸೂರು ತರಬೇತಿ ಕೇಂದ್ರದ ವತಿಯಿಂದ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನೇತೃತ್ವದಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಎರಡು ದಿನಗಳ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಾಗಾರ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಸುಗಳನ್ನು ಉತ್ತಮ ನಿರ್ವಹಣೆ ಮಾಡಿದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಇಳುವರಿ ಪಡೆಯಲು ಸಾಧ್ಯ. ಆದ್ದರಿಂದ ಹೈನುಗಾರರು ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಪನ್ಯಾಸಕರಾದ ಡಾ. ವೆಂಕಟೇಶ್ ಸ್ವಾಮಿ ಹಾಗೂ ಡಾ. ಮಾಧೇಶ ಸ್ವಾಮಿ ಹೈನುಗಾರಿಕೆ, ಹೈನುರಾಸುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ವಿಸ್ತರಣಾಧಿಕಾರಿ ಮಾಲತಿ, ಪೆರಿಯಡ್ಕ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀಮತಿ ಮಧುಷಾ, ನಿರ್ದೇಶಕರಾದ ಪ್ರಶಾಂತ್ ಪೆರಿಯಡ್ಕ, ಶೀನಪ್ಪ ಗೌಡ ಬೊಳ್ಳಾವು, ಜಯಂತ ಪೊರೋಳಿ, ಬಾಲಚಂದ್ರ ಕೊರಂಬಾಡಿ, ಸುಮತಿ, ವನಿತಾ, ಹೈನುಗಾರರಾದ ಬಾಬು ಗೌಡ ನೆಡ್ಚಿಲ್, ಶಂಕರನಾರಾಯಣ ಭಟ್, ಸತೀಶ್ ರಾವ್, ಧರ್ನಪ್ಪ ನಾಯ್ಕ, ವಸಂತ ಕುಂಟಿನಿ, ಜಗದೀಶ್ ಶೆಟ್ಟಿ ಹಾಗೂ ಶಾಖೆಪುರ, ವಳಾಲು, ವಳಕಡಮ, ಕಾಂಚನ, ಹಳೆನೇರೆಂಕಿ, ಆಲಂತಾಯ, ರಾಮಕುಂಜ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಹೈನುಗಾರರು ಶಿಬಿರದಲ್ಲಿ ಪಾಲ್ಗೊಂಡರು.
ಪೆರಿಯಡ್ಕ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಸುರೇಶ್ ಗೌಂಡತ್ತಿಗೆ ಸ್ವಾಗತಿಸಿದರು. ಗಣೇಶ್ ಕೆ. ವಂದಿಸಿದರು.