ಪುತ್ತೂರು : ನವ್ಯಶ್ರೀ ಮಹಿಳಾ ಮಂಡಲ ಪುತ್ತೂರು, ಶಿವಳ್ಳಿ ಮಹಿಳಾ ವಿಭಾಗ ಪುತ್ತೂರು,ವನಿತಾ ಮಹಿಳಾ ಸಮಾಜ ಹಾರಾಡಿ ಪುತ್ತೂರು, ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ದುರ್ಗಾ ವಾಹಿನಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಗೀತಾ ಜಯಂತಿ ಕಾರ್ಯಕ್ರಮವು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಡಿ.4ರಂದು ನಡೆಯಿತು.
ಬೆಳಿಗ್ಗೆ ಶ್ರೀ ರಾಘವೇಂದ್ರ ಉಡುಪರು ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಹಿಳೆಯರು ಭಗವದ್ಗೀತೆಯ 18 ಅಧ್ಯಾಯವನ್ನು ಪಠಿಸಿದರು.ಮಧ್ಯಾಹ್ನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಪೂವಪ್ಪ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಮುಖ್ಯ ಉಪನ್ಯಾಸಕರಾಗಿ ಕಾರ್ತಿಕ್ ತಂತ್ರಿ ಕೆಮ್ಮಿಂಜೆ ಇವರು ಆಗಮಿಸಿ ಭಗವದ್ಗೀತೆಯ ಮಹತ್ವ ಮತ್ತು ಸಾರವನ್ನು ಎಳೆ ಎಳೆಯಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು. ವತ್ಸಲಾ ರಾಜ್ಞಿ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ನಗರ ಪ್ರಮುಖ ಮೋಹಿನಿ ದಿವಾಕರ್, ಶಿವಳ್ಳಿ ಸಂಪದ ಮಹಿಳಾ ವಿಭಾಗದ ಕಾರ್ಯದರ್ಶಿ ವೀಣಾ ಕೊಳತ್ತಾಯರು ಉಪಸ್ಥಿತರಿದ್ದರು. ನವ್ಯಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಪ್ರೇಮಲತಾ ರಾವ್ ಧನ್ಯವಾದ ಗೈದು,ಮಾಲತಿ ನಿಡ್ವಣ್ಣಾಯರು ಕಾರ್ಯಕ್ರಮ ನಿರ್ವಹಿಸಿದರು.