ಸನಾತನ ಸಂಸ್ಕೃತಿ-ಸಂಸ್ಕಾರದ ಕಲಿಕೆಯೊಂದಿಗೆ ಆಧುನಿಕ‌ ವಿದ್ಯಾರ್ಜನೆಯ ಪುತ್ತೂರಿನ ಶೈಕ್ಷಣಿಕ ಕೇಂದ್ರ ತೆಂಕಿಲ ವಿವೇಕಾನಂದ‌ ಆಂಗ್ಲ‌ಮಾಧ್ಯಮ ಶಾಲೆಯಲ್ಲಿ ದ. 8 ರಿಂದ 10 ವಾರ್ಷಿಕೋತ್ಸವ ಸಂಭ್ರಮ

0

ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 2022-23ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮಗಳು ದ. 8 ರಿಂದ 10 ರವರೆಗೆ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಲಿದೆ. ದ. 8 ಮತ್ತು 9 ರಂದು ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಅಪರಾಹ್ನ 2.30 ದೀಪ ಪ್ರಜ್ವಲನೆಯಿಂದ ಆರಂಭಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಸಂಜೆ 6.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ‌ಮುಂದುವರಿಯಲಿವೆ.


ದ. 10 ರಂದು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ‘ಅವಿಯುಕ್ತ – 2022’ ಕಾರ್ಯಕ್ರಮ ನಡೆಯಲಿದೆ. ಶೈಕ್ಷಣಿಕವಾಗಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಫಲಿತಾಂಶ ಬಂದು, ಈರ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಹೆಗ್ಗಳಿಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯದ್ದಾಗಿದೆ. ಅದೇ ರೀತಿ ವಿವಿಧ ಕ್ರೀಡೆ, ವಿಜ್ಞಾನ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹೆಸರು ನಾಡಿನೆತ್ತರಕ್ಕೆ ಬೆಳೆದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ಸಂಸ್ಕಾರ, ಭಾರತೀಯ ಸನಾತನ ಸಂಸ್ಕೃತಿಯ ಕಲಿಕೆಯೊಂದಿಗೆ ಆಧುನಿಕ ವಿದ್ಯಾರ್ಜನೆಯನ್ನು ನೀಡುತ್ತಿರುವ ಶಾಲೆಯಲ್ಲಿ ಇದೀಗ ವಾರ್ಷಿಕೋತ್ಸವ ಸಂಭ್ರಮ ಮನೆಮಾಡಿದೆ.

LEAVE A REPLY

Please enter your comment!
Please enter your name here