ಡಿ.7-8: ಕಳುವಾಜೆಯಲ್ಲಿ ಶ್ರೀ ಚಾಮುಂಡಿ ದೈವ, ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕೋತ್ಸವ, ನೇಮೋತ್ಸವ

0

ಪುತ್ತೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ಆದಿಮನೆ ಕಳುವಾಜೆ ಇಲ್ಲಿ ಶ್ರೀ ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕೋತ್ಸವ ಮತ್ತು ನೇಮೋತ್ಸವ ಜೊತೆಗೆ ಶ್ರೀ ಕಳುವಾಜೆ ವೆಂಕಟ್ರಮಣ ಗೌಡರ ಸಂಪಾದಕೀಯದಲ್ಲಿ ಮೂಡಿ ಬಂದ ಕಳುವಾಜೆ ಸೋಮಪ್ಪ ಗೌಡರ ಸಾಧನೆಗಳ ಕುರಿತಾದ ‘ಕುಲದೀಪ’ ಪುಸ್ತಕ ಬಿಡುಗಡೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ.8 ರಂದು ಜರಗಲಿರುವುದು.

ಡಿ.7ರಂದು ಸಂಜೆ ತಂತ್ರಿಗಳ ಆಗಮನ ಹಾಗೂ ಸ್ವಾಗತ, ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಅಘೋರಹೋಮ, ಪ್ರೇತಾವಾಹನೆ, ಉಚ್ಛಾಟನೆ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ದುರ್ಗಾ ನಮಸ್ಕಾರ ಪೂಜೆ ಮತ್ತು ಪ್ರಸಾದ ವಿತರಣೆ ಜರಗಲಿದೆ. ಡಿ.8 ರಂದು ಬೆಳಿಗ್ಗೆ 12 ತೆಂಗಿನಕಾಯಿ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಶ್ರೀ ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಶ್ರೀ ಚಾಮುಂಡಿ ದೈವದ ಭಂಡಾರ ಹಿಡಿದು ನೇಮೋತ್ಸವವು ಜರಗಲಿರುವುದು. ಈ ಧಾರ್ಮಿಕ ಕಾರ್ಯಕ್ರಮವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಕಳುವಾಜೆ ಕುಟುಂಬದ ಹಿರಿಯರಾದ ಜಿನ್ನಪ್ಪ ಗೌಡ ಕಳುವಾಜೆರವರು ತಿಳಿಸಿದ್ದಾರೆ.

ಕುಲದೀಪ ಪುಸ್ತಕ ಬಿಡುಗಡೆ..

ಡಿ.8 ರಂದು ರಾತ್ರಿ ಕುಲದೀಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಜಿನ್ನಪ್ಪ ಗೌಡ ಕಳುವಾಜೆರವರು ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರು ಪುಸ್ತಕ ಪರಿಚಯ ಮಾಡಲಿದ್ದು, ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್‌ರವರು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನ್ಯಾಯವಾದಿ ಚಿದಾನಂದ ಬೈಲಾಡಿ, ಉಪನ್ಯಾಸಕರು ಹಾಗೂ ಜೇಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಬಿ.ಚಂದ್ರಹಾಸ ರೈಯವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here