ಉಪ್ಪಿನಂಗಡಿ: ಇಲ್ಲಿನ ಎಚ್.ಎಂ. ಅಡಿಟೋರಿಯಂ ಮುಂಭಾಗದಲ್ಲಿರುವ ಕೃಷಿ ಉಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ “ಕೃಷಿ ಏಜೆನ್ಸಿಸ್” ಐದನೇ ವರ್ಷಕ್ಕೆ ಹೆಜ್ಜೆ ಇರಿಸಿದ್ದು, ಈ ಸಂಭ್ರಮದಲ್ಲಿ ಹಲವು ಹೊಸತನಗಳೊಂದಿಗೆ ನವೀಕೃತಗೊಂಡು ಡಿ.8ರಂದು ಶುಭಾರಂಭಗೊಂಡಿತು.
ದೀಪ ಪ್ರಜ್ವಲನೆಗೈದು ಶುಭಾಶೀರ್ವಾದ ನೀಡಿದ ಅರಿಕ್ಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕ್ಕೋಡಿಯವರು, ಬ್ರಹ್ಮ, ವಿಷ್ಣು, ಮಹೇಶ್ವರರ ವಿಲೀನವೇ ಈ ಪ್ರಕೃತಿ. ಪ್ರಕೃತಿಗೂ ಕೃಷಿಗೂ ಅವಿನಾಭವ ಸಂಬಂಧವಿದೆ. ಕೊರೋನಾ ಕಾಲಘಟ್ಟದಲ್ಲಿ ಉದ್ಯೋಗ ಕಳೆದುಕೊಂಡ ಹಲವರಿಗೆ ಬದುಕು ನೀಡಿದ್ದು ಕೃಷಿ. ಆದ್ದರಿಂದ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕಾಗಿದೆ. ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ನಮ್ಮೊಳಗಿರುವ ಮಾಹಿತಿಗಿಂತ ಹೊರಗಿನ ಮಾಹಿತಿಯನ್ನು ಪಡೆದುಕೊಂಡಾಗ ಉತ್ತಮ ಲಾಭವನ್ನು ಕೃಷಿಕರು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಹಲವು ಹೊಸತನಗಳೊಂದಿಗೆ ಇಲ್ಲಿ ಕೃಷಿ ಏಜೆನ್ಸಿಸ್ ಶುಭಾರಂಭಗೊಂಡಿದ್ದು, ಇದು ಉತ್ತರೋತ್ತರ ಅಭಿವೃದ್ಧಿಯಾಗಲಿ. ಬೃಹತ್ ವೃಕ್ಷವಾಗಿ ಬೆಳೆದು ತನ್ನ ಸೇವೆಯ ಮೂಲಕ ಎಲ್ಲರಿಗೂ ನೆರಳಾಗಲಿ ಎಂದು ಹರಸಿದರು.
ಮುಖ್ಯ ಅತಿಥಿಯಾಗಿದ್ದ ತುಳು ಚಲನಚಿತ್ರ ನಟ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ದಿಗೆ ಶುಭ ಹಾರೈಸಿದರು.
ಕೋಡಿಬೈಲ್ ಇಂಪೋರ್ಟ್ & ಎಕ್ಸ್ ಪೋರ್ಟ್ ಪ್ರೈ.ಲಿ. ಪುತ್ತೂರು ಇದರ ಆಡಳಿತ ನಿರ್ದೇಶಕ ಅಜಯರಾಮ್ ಮಾತನಾಡಿ, ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೇ ಉತ್ತಮ ಸೇವೆಯನ್ನು ಕೃಷಿಕರಿಗೆ ನೀಡಿದಾಗ ಯಶಸ್ಸು ಸಾಧ್ಯ ಅನ್ನುವುದಕ್ಕೆ ಸದಾಶಿವ ರೈಯವರು ಉತ್ತಮ ಉದಾಹರಣೆ. ಅವರ ಈ ಸಂಸ್ಥೆ ಐದನೇ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಹೊಸ ರೂಪದೊಂದಿಗೆ ತೆರೆದುಕೊಳ್ಳುತ್ತಿದ್ದು, ಇನ್ನಷ್ಟು ಸೇವೆಯನ್ನು ನೀಡುವ ಮೂಲಕ ಅಭಿವೃದ್ಧಿಯ ಹಾದಿಯಲಿ ಮುಂದುವರಿಯಲಿ ಎಂದರು.
ಅತಿಥಿಗಳಾದ ಸಿಝ್ಲರ್ ಅಗ್ರಿಝೋನ್ ನ ಆಡಳಿತ ಪಾಲುದಾರ ಪ್ರಸನ್ನ ಕುಮಾರ್ ಶೆಟ್ಟಿ,ಯುವ ಉದ್ಯಮಿ, ಪ್ರಗತಿಪರ ಕೃಷಿಕ ಸೊರಕೆ ಶ್ರೀ ಫಾರಂನ ಭರತ್ ರೈ ಉಪಸ್ಥಿತರಿದ್ದರು.
ಕೃಷಿ ಏಜೆನ್ಸಿಸ್ ನ ಮಾಲಕ ಸದಾಶಿವ ರೈ ದಂಪತಿ ಧರ್ಮದರ್ಶಿ ಹರೀಶ್ ಅರಿಕ್ಕೋಡಿಯವರಿಗೆ ಗೌರವಾರ್ಪನೆ ಸಲ್ಲಿಸಿದರು.
ಅತಿಥಿಗಳಿಗೆ ವಂದನಾರ್ಪಣೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಮಾಲಕ ಸದಾಶಿವ ರೈ, ನಮ್ಮ ಸಹ ಸಂಸ್ಥೆ ಪುತ್ತೂರು ಕಾವೇರಿ ಕಟ್ಟೆಯ ಮರಿಯ ಕಾಂಪ್ಲೆಕ್ಸ್ ನಲ್ಲಿ ಕೂಡಾ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಉಪ್ಪಿನಂಗಡಿ ಸಂಸ್ಥೆಯು ಐದನೇ ವರ್ಷಕ್ಕೆ ಕಾಲಿಟ್ಟು ಹೊಸತನದೊಂದಿಗೆ ಶುಭಾರಂಭಗೊಂಡ ಹಿನ್ನೆಲೆಯಲ್ಲಿ ಇಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಕೃಷಿ ಯಂತ್ರೋಪಕರಣಗಳ ಮೇಲೆ ವಿಶೇಷ ರಿಯಾಯಿತಿ ದರದ ಮಾರಾಟ, ಮದ್ದು ಬಿಡುವ, ಹುಲ್ಲು ತೆಗೆಯುವ ಯಂತ್ರಗಳ ವಿನಿಮಯ ಮೇಳ, ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಸಿಸಿ ಟಿವಿ ಅಳವಡಿಕೆ ಮತ್ತು ಸಾವಯವ ಗೊಬ್ಬರ ಪ್ರದರ್ಶನ, ಮಾರಾಟ, ಸೇವೆ ಇಲ್ಲಿ ಲಭ್ಯವಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಗುರಿ ಎಂದರಲ್ಲದೆ, ಕೃಷಿಕರ ಇನ್ನಷ್ಟು ಸಹಕಾರ ಬಯಸಿದರು.
ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು ಸಾನ್ವಿ ರೈ ಹಾಗೂ ಶ್ರೇಯಾ ರೈ ಪ್ರಾರ್ಥಿಸಿದರು.
ಮಾಲಕರ ಪತ್ನಿ ಶಕಿಲಾ ಎಸ್ ರೈ ಅತಿಥಿಗಳನ್ನು ಸತ್ಕರಿಸಿದರು.
ಉದಯ್ ವರ್ಮ ಪದಂಗಡಿ ,ಚಿತ್ತರಂಜನ್ ಹೆಗ್ಡೆ ,ಮಮತಾ ಶೆಟ್ಟಿ ;ಅಂಜಲಿ ಭರತ್ ರೈ ;ರಾಕೇಶ್ ,ಹೇಮಂತ್ ,ರವೀಂದ್ರ,ಅಖೀಲ್ ಪುತ್ತೂರು, ಕೃಷ್ಣಪ್ಪ ಸರ್ವೆ,ಶ್ರೀಧರ್, ರಿಚಿ ಮಡಾಲ, ಸಂದೀಪ್ ಕೆಲ್ಲಾಡಿ, ಫಯಾಜ್, ಬಾಲಕೃಷ್ಣ, ರಿಚಾಂದ್, ಆತಿಕ್ ಸಾಮೆತಡ್ಕ, ಕೃಷ್ಣಪ್ಪ ಪೂಜಾರಿ ಕುಲ, ಕೆ. ಬಾಬು ಪೂಜಾರಿ ಬಲ್ನಾಡು, ಸಂತೋಷ್ ಕೆ, ಜಗನ್ನಾಥ್ ರೈ ,ಕಾರ್ತಿಕ್, ಬಾಲಕೃಷ್ಣ ರೈ ,ರಾಕೇಶ್ ರೈ, ಸುದರ್ಶನ್ ಶಿವರಾಮ್ ಕಂಪ್ಯೂಟರ್ ಪುತ್ತೂರು ಸಂತೋಷ್ ಬಿ.ಸಿ. ರೋಡ್ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.