ಆಲಂಕಾರು ಶ್ರೀ ದುರ್ಗಾ ಟವರ್ಸ್ ನಲ್ಲಿ ಆಶಾಪುರ ಏಜೆನ್ಸಿ ಇಲೆಕ್ಟ್ರೀಕಲ್ ಶುಭಾರಂಭ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾ ಟವರ್ಸ್‌ ನಲ್ಲಿ ಆಶಾಪುರ ಏಜೆನ್ಸಿ ಇಲೆಕ್ಟ್ರೀಕಲ್ ಮತ್ತು ಪ್ಲಬಿಂಗ್ ,ಸಿ.ಸಿ.ಟಿ.ವಿ ,ಹಾಡ್೯ ವೇರ್ ಟೂಲ್ಸ್ ನ ಹೋಲ್ ಸೇಲ್ ವಿತರಕರ ಅಂಗಡಿ ಡಿ.8 ರಂದು ಬೆಳಿಗ್ಗೆ ಶುಭಾರಂಭಗೊಂಡಿತು.‌

ಮಂಗಳೂರಿನ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಪ್ರಧಾನ ಆರ್ಚಕರಾದ ಗೋಪಾಲಕೃಷ್ಣ ಭಟ್ ಪೂಜಾ ವಿಧಿ ವಿಧಾನ ನೇರವೆರಿಸಿದರು. ಆಲಂಕಾರು ಶ್ರೀ ದುರ್ಗಾ ಟವರ್ಸ್‌ ನ ಮಾಲಕರ ರಾಧಾಕೃಷ್ಣ ರೈ ಪರಾರಿಗುತ್ತು,ವೆಕ್ಟಸ್ ಪೈಪ್ಸ್ ಹಾಗು ಟ್ಯಾಂಕ್ಸ್ ನ ರಿಜೀನಲ್ ಮ್ಯಾನೇಜರ್ ಪ್ರಶಾಂತ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭಾಹಾರೈಸಿದರು.‌

ಸಂಸ್ಥೆಯ ಮಾಲಕಮನೋಹರ ಸಿಂಗ್ ರವರು ಅಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ನಮ್ಮಲ್ಲಿ ಇಲೆಕ್ಟ್ರೀಕಲ್ ,ಪ್ಲಬಿಂಗ್ ,ಸಿ.ಸಿ ಟಿವಿ,ಹಾಡ್೯ ವೇರ್ ಟೂಲ್ಸ್ ಹೋಲ್ ಸೆಲ್ ದರದಲ್ಲಿ ದೊರೆಯುತ್ತದೆ ಎಂದು ತಿಳಿಸಿ ಗ್ರಾಹಕರು ಸಹಕರಿಸುವಂತೆ ತಿಳಿಸಿದರು.ಸಂಸ್ಥೆಯ ಸಿಬ್ಬಂದಿ ಸಚಿನ್ ರವರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here