ಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಕೆ.ಯು ಖಲೀಲ್ ಅರ್ಶದಿ ಕೋಲ್ಪೆ ಆಯ್ಕೆ

0

ಪುತ್ತೂರು: ಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಮ್ಯಾನೇಜರ್ ಕೆ.ಯು ಖಲೀಲ್ ಅರ್ಶದಿ ಕೋಲ್ಪೆ ಆಯ್ಕೆಯಾಗಿದ್ದಾರೆ. ಎಂಐಸಿ ಮಾಹಿನಾಬಾದ್ ಚಟ್ಟಂಜಾಲ್ ಇಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷ ಶೈಖುನಾ ಯು.ಎಂ ಉಸ್ತಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಬ್ರಾಹಿಂ ಕುಟ್ಟಿ ಕೊಡುವಳ್ಳಿ ಈ ಆಯ್ಕೆ ನಡೆಸಿದರು.

ಎಸ್ಕೆಎಸ್ಸೆಸ್ಸೆಫ್ ಈಶ್ವರಮಂಗಳ ಕ್ಲಸ್ಟರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಯು ಖಲೀಲ್ ಅರ್ಶದಿಯವರು ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದು ಚತುರ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here