ರೋಟರಿ ಕ್ಲಬ್ ಸಿಟಿ, ಇಂಟರ್‍ಯಾಕ್ಟ್ ಕ್ಲಬ್‌ನಿಂದ ಫಿಲೋಮಿನಾ ಪ್ರೌಢಶಾಲೆಯಲ್ಲಿ ದಂತ ತಪಾಸಣಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಇಂಟರ್‍ಯಾಕ್ಟ್ ಕ್ಲಬ್ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಇದರ ಜಂಟಿ ಆಶ್ರಯದಲ್ಲಿ ಎ.ಬಿ ಶೆಟ್ಟಿ ಇನ್ಸಿಟ್ಯೂಟ್ ಆಫ್ ಸೈನ್ಸ್ ಇದರ ಸಹಭಾಗಿತ್ವದಲ್ಲಿ ಡಿ.9 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ದಂತ ತಪಾಸಣಾ ಶಿಬಿರವು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ. ಆರೋಗ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಜೊತೆಗೆ ಕಾಲಕ್ಕನುಗುಣವಾಗಿ ಆರೋಗ್ಯ ತಪಾಸಣೆಯನ್ನು ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಿದರು. ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಪ್ರಶಾಂತ್ ಶೆಣೈ, ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಕಾರ್‍ಯದರ್ಶಿ ಜಯಗುರು ಆಚಾರ್, ಮಾಜಿ ಅಧ್ಯಕ್ಷ ಲಾರೆನ್ಸ್ ಗೊನ್ಸಾಲ್ವಿಸ್, ಎ.ಬಿ ಶೆಟ್ಟಿ ಇನ್ಸಿಟ್ಯೂಟ್ ಆಫ್ ಸೈನ್ಸ್‌ನ ಡಾ.ತಾರಾ ಉಪಸ್ಥಿತರಿದ್ದರು.

ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್ ಸ್ವಾಗತಿಸಿದರು. ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ನಿಕ್ಷೇಪ್ ಕೃಷ್ಣ ವಂದಿಸಿದರು. ಎ.ಬಿ ಶೆಟ್ಟಿ ಇನ್ಸಿಟ್ಯೂಟ್‌ನ 20 ಮಂದಿ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ದಂತ ತಪಾಸಣೆಯನ್ನು ನೆರವೇರಿಸಿದರು. ಸುಮಾರು 500 ವಿದ್ಯಾರ್ಥಿಗಳು ದಂತ ತಪಾಸಣೆಯಲ್ಲಿ ಪಾಲ್ಗೊಂಡರು. ಎನ್.ಸಿ.ಸಿ ಭೂದಳದ ಅಧಿಕಾರಿ ಫಸ್ಟ್ ಆಫಿಸರ್ ಪೀಟರ್ ನರೇಶ್ ಲೋಬೋ, ನೌಕಾದಳದ ಸೆಕೆಂಡ್ ಆಫಿಸರ್ ಕ್ಲೆಮೆಂಟ್ ಪಿಂಟೊ, ವಾಯುದಳದ ಸೆಕೆಂಡ್ ಆಫಿಸರ್ ರೋಶನ್ ಸಿಕ್ವೇರಾ, ಸ್ಕೌಟ್ ಮಾಸ್ಟರ್ ಬೆನೆಟ್ ಮೊಂತೇರೊ, ಸಂತ ಫಿಲೋಮಿನಾ ಪಿಯು ಕಾಲೇಜಿನ ಇಂಟರ್‍ಯಾಕ್ಟ್ ಕ್ಲಬ್‌ನ ಮೇಲ್ವಿಚಾರಕರು, ವಿದ್ಯಾರ್ಥಿಗಳು ಹಾಜರಿದ್ದರು. ಫಿಲೋಮಿನಾ ಪ್ರೌಢಶಾಲೆಯ ಎನ್.ಸಿ.ಸಿ ಕೆಡೆಟ್‌ಗಳು, ಸ್ಕೌಟ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here