ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿ ಗ್ರಾಮದ ರಾಮನಗರ ನಾವಲ್ಲಿ ಶ್ರೀ ನಾಗದೇವರು, ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರಿ ಗುಳಿಗ ದೈವ, ನಾವಲ್ಲಿ ಶ್ರೀ ಪಂಜುರ್ಲಿ, ಶ್ರೀ ಕಲ್ಲುರ್ಟಿ ಮತ್ತು ಪಾತ್ರಾಜೆ ಶ್ರೀ ಪಂಜುರ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಡಿ.9ರಂದು ನಡೆಯಿತು.
ಗಡಿಗಲ್ಲು ವೆಂಕಟೇಶ ಭಟ್‌ರವರ ಮಾರ್ಗದರ್ಶನದಲ್ಲಿ ಶ್ರೀವತ್ಸ ಭಟ್‌ರವರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ನಂತರ ನಾವಲ್ಲಿ ಶ್ರೀ ನಾಗದೇವರಿಗೆ ತಂಬಿಲ ಸೇವೆ, ಪಾತ್ರಾಜೆ ಶ್ರೀ ಪಂಜುರ್ಲಿ ದೈವದ ತಂಬಿಲ ಸೇವೆ ನಡೆಯಿತು. ನಂತರ ನಾವಲ್ಲಿ ಶ್ರೀ ಪಂಜುರ್ಲಿ ಮತ್ತು ಶ್ರೀ ಕಲ್ಲುರ್ಟಿ ದೈವಗಳಿಗೆ ತಂಬಿಲ ಸೇವೆ ನಡೆದು ಮಧ್ಯಾಹ್ನ ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ಕ್ಷೇತ್ರ ಬಲ್ಯ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅಮೆತ್ತಿಮಾರುಗತ್ತು ಕೃಷ್ಣಶೆಟ್ಟಿ ನಂದುಗುರಿ, ಇಂಜಿನಿಯರ್ ಚಂದ್ರಹಾಸ ಗೌಡ ಪನ್ಯಾಡಿ, ಅಮೆತ್ತಿಮಾರುಗುತ್ತು ಕುಟುಂಬದ ಹಿರಿಯರಾದ ರೇವತಿ ನಾರಾಯಣ ಶೆಟ್ಟಿ ನಂದುಗುರಿ, ಮಡಂತ್ಯಾರು ಗ್ರಾ.ಪಂ.ಸದಸ್ಯ ಮೂಡಾಯೂರು ಕಿಶೋರ್ ಶೆಟ್ಟಿ, ಬಲ್ಯ ಶ್ರೀ ವಿನಾಯಕ ಭಜನಾ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಗೌಡ ಹುಣ್ಸೆಬೆಟ್ಟು, ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ಪಡಿಪಂಡ, ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಪದೆಂಜಿಲಗುತ್ತು ಪ್ರವೀಣ್ ಶೆಟ್ಟಿ, ದೈವಸ್ಥಾನದ ಕೂಡುಕಟ್ಟಿನ ಮನೆಯವರಾದ ರವಿಶೆಟ್ಟಿ ಕೂರಟ, ಉದಯಕುಮಾರ್ ಶೆಟ್ಟಿ ಕೂರಟ, ಪುಷ್ಪರಾಜ ಮಾರ್ಲ ರಾಮನಗರ, ಜಗದೀಶ ಮಾರ್ಲ ಲಕ್ಷ್ಮಿನಿವಾಸ ರಾಮನಗರ, ನಿತಿನ್ ಮಾರ್ಲ ಹೊಸವೊಕ್ಲು, ನಾಲ್ಗುತ್ತು ದಿವಾಕರ ಗೌಡ, ನಾಲ್ಗುತ್ತು ದಿನಕರ ಗೌಡ, ಭಿರ್ಮಣ ಗೌಡ ಹುಣ್ಸೆಬೆಟ್ಟು, ಬಲ್ಯ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ, ಕುಟ್ರುಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ, ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ, ನಿವೃತ್ತ ಶಿಕ್ಷಕ ನೆಲ್ಲ ದೇವಣ್ಣ ಗೌಡ, ಭಾರತೀಯ ಭೂಸೇನೆಯ ನಿವೃತ್ತ ಯೋಧ ಕಡಿರ ಗಿರಿಯಪ್ಪ ಗೌಡ, ಕಡಿರ ವಿಠಲ ಗೌಡ, ಬಲ್ಯ ಬೀರುಕು ರಾಜಂದೈವ ಸೇವಾಟ್ರಸ್ಟ್‌ನ ಅಧ್ಯಕ್ಷ ಕೊಡಂಗೆ ಸುರೇಶ ಗೌಡ, ಬಲ್ಯ ಉಮಾಮಹೇಶ್ವರಿ ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್, ನಡುಗುಡ್ಡೆ ರಾಜಂದೈವದ ಗುತ್ತಿನವರಾದ ಚಿತ್ತರಂಜನ್ ರೈ ನಡುಗುಡ್ಡೆ, ರಮಾನಾಥ ರೈ ಸಹಿತ ಹಲವು ದೈವ, ದೇವಸ್ಥಾನಗಳ ಹಿರಿಯರು, ಗ್ರಾಮಸ್ಥರು, ಅಮೆತ್ತಿಮಾರುಗುತ್ತು, ನಾಲ್ಗುತ್ತು, ಪಾತ್ರಾಜೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಸನ್ಮಾನ: ಖ್ಯಾತ ಯಕ್ಷಗಾನ ಕಲಾವಿದ, ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಿತು. ನೆಲ್ಯಾಡಿ ಗ್ರಾ.ಪಂ.ಸದಸ್ಯ ಬೈಲುಗುತ್ತು ರವಿಪ್ರಸಾದ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಭಾಷಣ ಮಾಡಿದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ, ಯಕ್ಷಗಾನ ಕಲಾವಿದ ಚಂದ್ರಶೇಖರ ಆಲಂಕಾರುರವರು, ಗುಡ್ಡಪ್ಪ ಬಲ್ಯರವರು ಬಹುಮುಖ ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ. ತನ್ನ ನಡೆ ನುಡಿಯಲ್ಲಿ ಸಂಸ್ಕಾರ, ಶಿಸ್ತು, ಸಮಯ ಪ್ರe, ಕರ್ತವ್ಯ ನಿಷ್ಠೆ, ನಿರಾಡಂಬರ ಜೀವನ ಶೈಲಿಯನ್ನು ರೂಢಿಸಿಕೊಂಡು ಮಾದರಿಯ ವ್ಯಕ್ತಿಯಾಗಿದ್ದಾರೆ ಎಂದರು. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸಿದ್ದಾರೆ. ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿಯಾಗಿ, ಪಾತ್ರಕ್ಕೆ ಜೀವ ತುಂಬಬಲ್ಲ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಸೇವೆ ನಿರಂತರವಾಗಿರಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಡ್ಡಪ್ಪ ಬಲ್ಯರವರು, ಹುಟ್ಟೂರಿನ ಈ ಕಾರಣಿಕದ ಪುಣ್ಯ ನೆಲದಲ್ಲಿ ನಡೆಯುತ್ತಿರುವ ಸನ್ಮಾನ ಅತೀವ ಸಂತಸ ತಂದಿದೆ. ಊರಿನ ಜನರ ಪ್ರೀತಿಗೆ ಅಭಾರಿಯಾಗಿದ್ದೇನೆ ಎಂದರು. ಅನ್ನದಾನದ ಸೇವಾಕರ್ತರಾದ ನಾರಾಯಣ ಗೌಡ ಪಾತ್ರಾಜೆ, ಯಕ್ಷಗಾನ ತಾಳಮದ್ದಲೆಯ ಸೇವಾಕರ್ತರಾದ ಬಲ್ಯ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡರನ್ನು ಶಾಲುಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ನಾವಲ್ಲಿ ಶ್ರೀ ನಾಗದೇವರ ಸೇವಾಕರ್ತರಾದ ನಾಲ್ಗುತ್ತು ರಮೇಶ ಗೌಡ, ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ ಹೊಸಮನೆ, ಕೊರಗಪ್ಪ ರೈ ಕುರುಬರಕೇರಿ, ಪಾತ್ರಾಜೆ ಕೃಷ್ಣಪ್ಪ ಗೌಡ, ಪಾತ್ರಾಜೆ ನಾರಾಯಣ ಗೌಡ, ಯಾದವ ಶೆಟ್ಟಿ ರಾಮನಗರ, ನಾಲ್ಗುತ್ತು ವಾಸಪ್ಪ ಗೌಡ, ದೈವಗಳ ಆರಾಧನೆಗೆ ಒಳಪಟ್ಟ ಕೂಡುಕಟ್ಟಿನವರು ಉಪಸ್ಥಿತರಿದ್ದರು.
ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿದರು. ನಾಲ್ಗುತ್ತು ಜಯರಾಮ ಗೌಡ ವಂದಿಸಿದರು.
ತಾಳಮದ್ದಳೆ: ಮಧ್ಯಾಹ್ನ ರಾಮನಗರ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ’ ಶ್ರೀ ತರಣಿ ಸೇನ ಕಾಳಗ’ ನಡೆಯಿತು. ಹಿಮ್ಮೇಳದಲ್ಲಿ ಕಿಶೋರ್ ಶೆಟ್ಟಿ, ಕುಸುಮಾಕರ ಆಚಾರ್ಯ, ಮೋಹನ ಶರವೂರು, ಶ್ರೀಪತಿ ಭಟ್, ದಿವಾಕರ ಆಚಾರ್ಯ ಹಳೆನೇರೆಂಕಿ ಭಾಗವಹಿಸಿದರು. ಮುಮ್ಮೇಳದಲ್ಲಿ ಚಂದ್ರಶೇಖರ ಆಲಂಕಾರು, ಗುಡ್ಡಪ್ಪ ಬಲ್ಯ, ನಾರಾಯಣ ಭಟ್ ಆಲಂಕಾರು, ಜಯರಾಮ ಗೌಡ ನಾಲ್ಗುತ್ತು, ವಾಸಪ್ಪ ಗೌಡ ನಾಲ್ಗುತ್ತು, ಕಿರಣ್ ಪುತ್ತಿಲ, ದಿವಾಕರ ಆಚಾರ್ಯ, ಗಂಗಾಧರ ಶೆಟ್ಟಿ ಹೊಸಮನೆ ಭಾಗವಹಿಸಿದ್ದರು.