ನೆಕ್ಕಿಲಾಡಿ: ಗ್ರಾ.ಪಂ.ನ ಪಂಪ್ ಹೌಸ್, ಕೊಳವೆ ಬಾವಿ ಅತಿಕ್ರಮಣ-ಆರೋಪ

0

ಉಪ್ಪಿನಂಗಡಿ: ೩೪34 ನೆಕ್ಕಿಲಾಡಿ ಗ್ರಾಮ ಪಂಚಾಯತ್‌ಗೆ ಸೇರಿದ ಪಂಪ್ ಹೌಸ್ ಹಾಗೂ ಕೊಳವೆ ಬಾವಿಯ ಸುತ್ತ ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಿ ಅತಿಕ್ರಮಿಸಿಕೊಂಡಿಡ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಇಲ್ಲಿನ ತಾಳೆಹಿತ್ಲುವಿನ ಬಳಿ ಗ್ರಾ.ಪಂ.ನ ಕುಡಿಯುವ ನೀರಿನ ಪಂಪ್ ಹೌಸ್ ಹಾಗೂ ಕೊಳವೆ ಬಾವಿಯಿದ್ದು, ಈ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಗ್ರಾ.ಪಂ. ಇದಕ್ಕೆ ಪರ್ಯಾಯವಾಗಿ ಬೇರೆ ಕಡೆ ಮತ್ತೊಂದು ಕೊಳವೆ ಬಾವಿಯನ್ನು ಕೊರೆಸಿತ್ತು. ಆ ಬಳಿಕ ಗ್ರಾ.ಪಂ.ನ ಕುಡಿಯುವ ನೀರಿನ ಪಂಪ್ ಚಾಲಕನಾಗಿರುವ ವ್ಯಕ್ತಿಯೋರ್ವರು ತನ್ನ ಜಾಗದ ಬಳಿಯೇ ಇರುವ ಈ ಹಿಂದಿನ ಕೊಳವೆ ಬಾವಿ ಹಾಗೂ ಪಂಪ್ ಹೌಸ್‌ಗೆ ಬೇಲಿ ಹಾಕಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಗ್ರಾ.ಪಂ. ಸ್ವತ್ತಿನ ಅತಿಕ್ರಮಣವನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಇದನ್ನು ಒತ್ತುವರಿ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತೆರವಿಗೆ ಸೂಚಿಸಿದ್ದೇನೆ: ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ 34 ನೆಕ್ಕಿಲಾಡಿ ಗ್ರಾ.ಪಂ. ಪ್ರಭಾರ ಪಿಡಿಒ ಸತೀಶ್ ಬಂಗೇರ, ಗ್ರಾ.ಪಂ.ಗೆ ಸೇರಿದ ಕೊಳವೆ ಬಾವಿ ಹಾಗೂ ಪಂಪ್ ಹೌಸ್ ಅನ್ನು ಗ್ರಾ.ಪಂ.ನ ಪಂಪ್ ಚಾಲಕ ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಆ ಬಳಿಕ ಆ ವ್ಯಕ್ತಿಯನ್ನು ಕರೆದು ಅದನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಬಳಿಕದ ವಿದ್ಯಮಾನ ಏನಾಗಿದೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ತೆರವುಗೊಳಿಸದಿದ್ದಲ್ಲಿ ತೆರವಿಗೆ ಕ್ರಮ ವಹಿಸುತ್ತೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here