ರಾಮಕುಂಜದ ಅನುಪ್ರಿಯಾ ಇಂಡೋ- ಟಿಬೆಟಿಯನ್ ಗಡಿ ಪೊಲೀಸ್ ಪಡೆಗೆ ಆಯ್ಕೆ

0

ರಾಮಕುಂಜ: ಸ್ಟಾಫ್ ಸೆಲೆಕ್ಷನ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ ಅನುಪ್ರಿಯಾ ಪಿ.ಜಿ.ಅವರು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗೆ ಆಯ್ಕೆಯಾಗಿದ್ದಾರೆ.‌


2021ರಲ್ಲಿ ನಡೆದ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಅನುಪ್ರಿಯಾ ಪಿ.ಜಿ.ರವರು ಬೆಂಗಳೂರಿನಲ್ಲಿ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಹಾಗೂ ಬೆಂಗಳೂರಿನ ಬಿಎಸ್‌ಎಫ್‌ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಗೆ (ಐಟಿಬಿಪಿ)ಆಯ್ಕೆಯಾಗಿದ್ದಾರೆ. ಇವರಿಗೆ ಡಿ.12ರಂದು ಹರಿಯಾಣದಲ್ಲಿ ಐಟಿಬಿಪಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ಆಗಿದೆ. ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ, ಕೂಲಿಕಾರ್ಮಿಕ ಗಿರೀಶ್ ಪಿ., ಹಾಗೂ ಜ್ಯೋತಿ ದಂಪತಿಯ ದ್ವಿತೀಯ ಪುತ್ರಿಯಾಗಿರುವ ಅನುಪ್ರಿಯಾ ಪಿ.ಜಿ.ಅವರು ಕುಣಿಗಲ್‌ನ ಶ್ರೀ ದುರ್ಗಾವಿದ್ಯಾಕೇಂದ್ರದಲ್ಲಿ ಪ್ರಾಥಮಿಕ, ಕುಣಿಗಲ್‌ನ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರೌಢಶಿಕ್ಷಣ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಕಾಂ.ಪದವಿ ವ್ಯಾಸಂಗ ಮಾಡಿದ್ದಾರೆ.

LEAVE A REPLY

Please enter your comment!
Please enter your name here