ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ 2023ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ದ.11 ರಂದು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರ ಮಾರ್ಗದರ್ಶನದಲ್ಲಿ ನೆರವೇರಿತು.
ನೂತನ ಅಧ್ಯಕ್ಷರಾಗಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಡಳಿತ ಸಿಬ್ಬಂದಿ ಮಾರ್ಟಿನ್ ಡಿ’ಸೋಜ ಕೂರ್ನಡ್ಕ, ಕಾರ್ಯದರ್ಶಿಯಾಗಿ ಸಂತ ಫಿಲೋಮಿನಾ ಪ್ರೌಢಶಾಲೆಯ ಆಡಳಿತ ಸಿಬ್ಬಂದಿ ವಿಲಿಯಂ ನೊರೋನ್ಹಾ ಪರ್ಲಡ್ಕ, ಕೋಶಾಧಿಕಾರಿಯಾಗಿ ಕುಡಿಪಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ತೆಂಕಿಲರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಪ್ರವೀಣ್ ಮೊಂತೇರೊ ಬುಳೇರಿಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಜೋನ್ಸನ್ ಡೇವಿಡ್ ಸಿಕ್ವೇರಾ ಹಾರಾಡಿ, ಧಾರ್ಮಿಕ ಕಾರ್ಯದರ್ಶಿಯಾಗಿ ರಿಚರ್ಡ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಲೆಕ್ಕ ಪರಿಶೋಧಕರಾಗಿ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಲ್ಲಿಮಾರು, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನವೀನ್ ಡಿ’ಸೋಜ ಪದವು, ಧಾರ್ಮಿಕ ಸ್ಟಾಲ್ ಮುಖ್ಯಸ್ಥರಾಗಿ ಡೆನ್ನಿಸ್ ಸೆರಾವೋ ದರ್ಬೆ, ಸಹಾಯಕರಾಗಿ ಸೈಮನ್ ಡಿ’ಸೋಜ ಬಲ್ನಾಡು, ಎಸ್ಕೋ ಸದಸ್ಯರಾಗಿ ಜೇಸನ್ ವರ್ಗೀಸ್, ಸಮಿತಿ ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷ ಜೋಯೆಲ್ ಕುಟಿನ್ಹಾ ಹಾರಾಡಿ, ವಿನ್ಸೆಂಟ್ ಮಸ್ಕರೇನ್ಹಸ್ ಪರ್ಲಡ್ಕ, ಎಲ್ಯಾಸ್ ಪಿಂಟೋ ಕೊಂಬೆಟ್ಟುರವರು ಆಯ್ಕೆಯಾಗಿದ್ದಾರೆ. ಸದಸ್ಯ ಜೇಸನ್ ವರ್ಗೀಸ್ ರವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.