ನಿಡ್ಪಳ್ಳಿ; ಗ್ರಾಮದ ಅಭಿವೃದ್ಧಿಗೆ ಬೇಕಾದ ದೂರದೃಷ್ಟಿ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ಗ್ರಾಮ ಸಭೆ ಅಧ್ಯಕ್ಷೆ ಗೀತಾ.ಡಿ ಇವರ ಅಧ್ಯಕ್ಷತೆಯಲ್ಲಿ ಡಿ.12 ರಂದು ನಡೆಯಿತು.
ಗ್ರಾಮದ ಅಭಿವೃದ್ಧಿಗೆ ಬೇಕಾದ ದೂರದೃಷ್ಟಿ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ತೋಟಗಾರಿಕೆ ಇಲಾಖೆಯ ಅಧಿಕಾರಿ ರೇಖಾ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.ಪಂಚಾಯತ್ ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಸದಸ್ಯರಾದ ಮುರಳೀಕೃಷ್ಣ ಮುಂಡೂರು, ಬಾಲಚಂದ್ರ .ಕೆ, ಗ್ರೇಟಾ ಜೆನೆಟಾ ಡಿ’ ಸೋಜಾ,ತುಳಸಿ, ಸೀತಾ, ತಾಲೂಕು ಸಂಯೋಜಕಿ ಅಶ್ವಿನಿ.ಎಂ, ಎಮ್.ಬಿ.ಕೆಯ ಭವ್ಯ.ಬಿ ಉಪಸ್ಥಿತರಿದ್ದರು.
ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು.
ಮುಂಡೂರು ಶಾಲಾ ಸಹಶಿಕ್ಷಕಿ ಸಾವಿತ್ರಿ, ನಿಡ್ಪಳ್ಳಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹೇಮಾ. ಎನ್,ಸಮುದಾಯ ಆರೋಗ್ಯ ಅಧಿಕಾರಿ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.