ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ 6 ವರ್ಷಗಳ ಹಿಂದೆ ವಿಟ್ಲದಲ್ಲಿ ಪಾರಂಭಗೊಂಡು ಈಗ ಜಿಲ್ಲಾದ್ಯಂತ ಮಂಗಳೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಮೂಡಬಿದಿರೆ ಹೀಗೆ 4 ಘಟಕಗಳನ್ನೊಳಗೊಂಡ ಸುಮಾರು 600 ಸದಸ್ಯರ ಬಲಿಷ್ಠ ಸಂಘಟನೆಯಾಗಿದೆ. ಜನವರಿ 2023 ರಿಂದ ಜಿಲ್ಲಾಮಟ್ಟದಲ್ಲಿ ಪರಿಷ್ಕೃತ ಏಕದರ ಪಟ್ಟಿ ಅನುಷ್ಠಾನಗೊಳ್ಳಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಉದ್ಯಮವು ಸುಮಾರು 4000 ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ 5 ವರ್ಷಗಳು ಸದಸ್ಯರ ಸಮಸ್ಯೆಗೆ ಸೂಕ್ತ ಸ್ಪಂದನೆ, ಸಾಮಾಜಿಕ ಗೌರವ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಬೆಂಬಲ ಕೊರೋನಾ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಾಗಿ ಪೂರೈಕೆ ಮುಂತಾದ ಹತ್ತಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಂಘವು ಮುಂದಿನ ದಿನಗಳಲ್ಲಿ ತನ್ನದೇ ಆದ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಗುರಿ ಹೊಂದಿದೆ. ನಮ್ಮ ಸದಸ್ಯರ, ಕಾಮಿಕರ ಮತ್ತು ಗ್ರಾಹಕರ ಹಿತಾಸಕ್ತಿಗಾಗಿ ಸಂಘವು ತನ್ನದೇ ಆದ ನಿಯಮಗಳನ್ನು ಮಾಡಿಕೊಂಡಿದೆ. ನಮ್ಮ ಸದಸ್ಯರು ಯಾವುದು ಸರಕಾರಿ ಸಭೆ, ಸಮಾರಂಭಗಳ ಕೆಲಸಗಳನ್ನು ಸಮಗ್ರವಾದ ಮಾಹಿತಿ(ಕೆಲಸದ ಆದೇಶ) ಪಡೆದು ನಂತರ ಕೆಲಸವನ್ನು ನಿರ್ವಹಿಸುವುದು. ಧಾರ್ಮಿಕ ಸಂಸ್ಥೆಗಳು ಮತ್ತು ಇತರ ಸಂಘ ಸಂಸ್ಥೆಗಳು ದರಪಟ್ಟಿ ಕರೆದಲ್ಲಿ ಸದಸ್ಯರು ಸಂಘದ ದರಪಟ್ಟಿ ಅನ್ವಯ ನೀಡತಕ್ಕದ್ದು. ಗ್ರಾಹಕರು ಕೆಲಸ ನಿರ್ವಹಿಸಿದ ಬಳಿಕ ಪಾವತಿಗಾಗಿ, ವಿಳಂಬ ಧೋರಣೆ ತೋರಿದಲ್ಲಿ ಹಾಗೂ ಬಾಕಿ ಇರಿಸಿದಲ್ಲಿ ಅಂತಹ ಗ್ರಾಹಕರಿಗೆ ಸಂಘದ ಯಾವುದೇ ಸದಸ್ಯರು ಯಾವುದೇ ಸೇವೆಯನ್ನು ನೀಡಬಾರದು. ಸದಸ್ಯತ್ವ ಪಡೆಯದ ಸಂಘದ ನಿಯಮಗಳನ್ನು ಪಾಲಿಸದ ಬೆರಳೆಣಿಕೆಯ ಮಾಲಕರಿಗೆ ಸಂಘವು ಹಾಗೂ ಸಂಘದ ಸದಸ್ಯರು ಯಾವುದೇ ಸಹಕಾರ ನೀಡುವುದಿಲ್ಲ. ಗ್ರಾಹಕರು ನಮ್ಮ ಸದಸ್ಯರಿಗೆ ಸೂಕ್ತವಾದ ಬೆಂಬಲ ನೀಡಿ ನಮ್ಮ ಈ ಉದ್ದಿಮೆಯನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ ಮಾಡುವುದಾಗಿ ಜಿಲ್ಲಾಧ್ಯಕ್ಷ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಜಿಲ್ಲಾ ಖಜಾಂಜಿ ಬಾಲಕೃಷ್ಣ ಕದ್ರಿ, ಜಿಲ್ಲಾ ಉಪಾಧ್ಯಕ್ಷ ಸುಭಾಶ್ಚಂದ್ರ ಜೈನ್, ಮಂಗಳೂರು ಘಟಕದ ಅಧ್ಯಕ್ಷ ಯುವರಾಜ ಮೂಡುಶೆಡ್ಡೆ, ಕಾರ್ಯದರ್ಶಿ ಗುರುದತ್ತ ಪೈ ಮೊದಲಾದವರು ಉಪಸ್ಥಿತರಿದ್ದರು.