ಪುತ್ತೂರು: ಆರ್ಯಾ ಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು1 ಕೋಟಿ 60 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಡಿ. 15ರಂದು ನಡೆಯಿತು.
ಕಾರ್ಯದಕ್ರಮದ ಕೊನೆಯ ಭಾಗವಾದ ಸಮಾರೋಪ ಸಮಾರಂಭ ಕಾರ್ಯಕ್ರಮ ಸಂಟ್ಯಾರಿನ ಯತೀಶ್ ದೇವ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಕ್ಷದ ಹಿರಿಯರೂ, ಪ್ರಗತಿಪರ ಸಾವಯವ ಕೃಷಿಕರಾದ ಎ.ಪಿ ಸದಾಶಿವ ಭಟ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಶಾಸಕ ಸಂಜೀವ ಮಠoದೂರು ಮಾತನಾಡಿ, ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ 1.60 ಕೋಟಿ ರೂ.ನ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಆ ಎಲ್ಲಾ ಯೋಜನೆಗಳು ಜಾರಿಗೆ ಬರಲಿದೆ ಎಂದರು.
ಬಿ ಜೆ ಪಿ ಮಹಾಶಕ್ತಿ ಕೇಂದ್ರದ ಸಂಚಾಲಕ ಜಯರಾಮ ಪೂಜಾರಿ ಮಾತನಾಡಿ, ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಯಾ ಪು ಶಕ್ತಿ ಕೇಂದ್ರದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳದಡ್ಡ, ಆರ್ಯಾ ಪಿನ ವಿವಿಧ ಬೂತಿನ ಅಧ್ಯಕ್ಸರು ಮತ್ತು ಪದಾಧಿಕಾರಿಗಳು, ಆರ್ಯಾ ಪು ಗ್ರಾಮ ಪಂಚಾಯತಿನ ಸದಸ್ಯರಾದ ಹರೀಶ್ ನಾಯಕ್ ವಾಗ್ಲೆ, ಗಿರೀಶ್, ಚೇತನ್ ದೇವಸ್ಯ, ಪವಿತ್ರ ಸಂತೋಷ್ ರೈ ತೊಟ್ಲ , ಕಸ್ತೂರಿ ಕೃಷ್ಣಪ್ಪ ಪೂಜಾರಿ ಕೂರೇಲು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಣೇಶ್ ರೈ ಮೂಲೆ, ಆರ್ಯಾ ಪು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಜಯಂತ ಶೆಟ್ಟಿ ಕಂಬಳದಡ್ಡ ಸ್ವಾಗತಿಸಿ, ಶಶಿಧರ ಮರಿಕೆ ವಂದಿಸಿದರು.
ಫೊಟೋ: ಎಂಎಲ್ಎ_ಸಂಟ್ಯಾರ್