ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಶಿರಾಡಿ ದೈವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಾರ್ಷಿಕ ನೇಮೊತ್ಸವವು ಡಿ.15 ಮತ್ತು ಡಿ.16 ರಂದು ನಡೆಯಿತು.
ಡಿ.15 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ನೇತೃತ್ವದಲ್ಲಿ ಶಿರಾಡಿ ದೈವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ, ಅಶ್ಲೇಷ ಬಲಿ, ದೈವಗಳಿಗೆ ಕಲಶಾಭಿಷೇಕ, ತಂಬಿಲ, ಪ್ರಸಾದ ವಿತರಣೆ, ಮಧ್ಯಾಹ್ನ ಪ್ರಸಾದ ಭೋಜನ ನಡೆದು, ಸಂಜೆ ಕೆದಿಲದಲ್ಲಿ ಶಿರಾಡಿ ದೈವದ ಭಂಡಾರ ತೆಗೆದು , ಅದೇ ಸಮಯಕ್ಕೆ ನರ್ತನೋತ್ಸವದ ಸ್ಥಳದಲ್ಲಿ ಕಲ್ಕುಡ, ಕಲುರ್ಟಿ, ಪಂಜುರ್ಲಿ ಗುಳಿಗ ದೈವದ ಭಂಡಾರ ತೆಗೆದು ರಾತ್ರಿ ಭಜನೆ, ಪ್ರಸಾದ ಭೋಜನ ನಡೆದು ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಗುಳಿಗ ಹಾಗು ಚಾಮುಂಡಿ ದೈವದ ನರ್ತನೋತ್ಸವ ನಡೆಯಿತು.ಡಿ.16 ರಂದು ಶಿರಾಡಿ,ಗುಳಿಗ ದೈವದ ನೇಮೋತ್ಸವ ನಡೆದು ಅನ್ನಪ್ರಸಾದ ನಡೆದು ಗಡಿಜಾಗಕ್ಕೆ ಪ್ರಯಾಣ ನಡೆಯಿತು.
ಅಗಮಿಸಿದ ಸಾವಿರಾರು ಭಕ್ತಾಧಿಗಳು ದೈವಕ್ಕೆ ಹರಕೆ, ಕೈಕಾಣಿಕೆ ಅರ್ಪಿಸಿ ದೈವದ ಸಿರಿ ಮುಡಿ ಗಂಧ ಪ್ರಸಾಧ ಸ್ವಿಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೋಂಡರು.ಈ ಸಂಧರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ,ಸೂರಪ್ಪ ಪೂಜಾರಿ ಹೊಸಮಜಲು ಹಾಗು ಪ್ರಮುಖ ಕಾರ್ಯಕರ್ತರು ಹಾಗು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.