ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ವತಿಯಿಂದ ಭಾರತ್ ಜೋಡೊ ಯಾತ್ರೆಯ 100ರ ಸಂಭ್ರಮಾಚರಣೆ

0

ಪುತ್ತೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರ ತನಕ 150 ದಿನಗಳ ಕಾಲ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆಯು ನೂರು ದಿನ ಪೂರೈಸಿದ ಸಂಭ್ರಮಾಚರಣೆಯನ್ನು ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ವತಿಯಿಂದ ಪುತ್ತೂರು ಗಾಂಧಿ ಕಟ್ಟೆಯಲ್ಲಿ ನಡೆಸಲಾಯಿತು.‌

ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅವರು
ದೇಶದ ಇತಿಹಾಸದ ಪುಟದಲ್ಲಿ ಭಾರತ್ ಜೋಡೋ ಯಾತ್ರೆ ಒಂದು ಜನಮನ್ನಣೆಯನ್ನು ಗಳಿಸಿದೆ ಯಾಕೆಂದರೆ ಇದರ ನೇತೃತ್ವವನ್ನು ವಹಿಸಿರುವುದು ರಾಹುಲ್ ಗಾಂಧಿಯವರು. ಅಗರ್ಭ ಶ್ರೀಮಂತ ಕುಟುಂಬದಿಂದ ಬಂದಿರುವ ರಾಹುಲ್ ಗಾಂಧಿಯವರು ಅಧಿಕಾರಕ್ಕಾಗಿ ಈ ಯಾತ್ರೆ ನಡೆಸುತ್ತಿಲ್ಲ ಯಾಕೆಂದರೆ ಇವರ ತಾಯಿ ಸೋನಿಯಾ ಗಾಂಧಿಯವರು ತನ್ನ ಕೈ ಬುಡಕ್ಕೆ ಬಂದ ಅಧಿಕಾರವನ್ನು ತ್ಯಾಗ ಮಾಡಿದವರು ಈ ಯಾತ್ರೆ ಅಸಹಾಯಕರ ಪರವಾಗಿ ನಿರ್ಗತಿಕರ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಸಮಾಜದ ಕಟ್ಟಕಡೆಯ ಬಡವರ್ಗದ ಪರವಾಗಿ ಹಾಗೂ ವಿಶೇಷವಾಗಿ ಪ್ರಜಾಪ್ರಭುತ್ವ ಉಳಿವಿಕೆಗಾಗಿ ಈ ಯಾತ್ರೆಯ ಉದ್ದೇಶವಾಗಿದೆ ಎಂದರು. ಇದೀಗ ಯಾತ್ರೆ 100 ದಿನಕ್ಕೆ ಕಾಲಿಟ್ಟಿದ್ದು ನಮಗೆಲ್ಲರಿಗೂ ಹೊಸ ಚೈತನ್ಯ ಮೂಡಿಸಿದೆ. ಈ ಯಾತ್ರೆ ಜಮ್ಮು ಕಾಶ್ಮೀರ ತಲುಪುವಷ್ಟರಲ್ಲಿ ದೇಶದಲ್ಲಿ ಒಂದು ಬದಲಾವಣೆ ಖಂಡಿತಾ ಉಂಟುಮಾಡಲಿದೆ ಎಂದು ಅವರು ಹೇಳಿದರು.


ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕೋಮು ದ್ವೇಷದ ವಿರುದ್ಧ ಜಾತ್ಯಾತೀತ ಸಿದ್ಧಾಂತದ ಉಳಿವಿಗಾಗಿ ರಾಹುಲ್ ಗಾಂಧೀಯವರು ಕೈ ಗೊಂಡಿರುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯೋಗ ನಮ್ಮ ಪಾಲಿಗೆ ಒದಗಿ ಬಂದದ್ದು ನಮಗೆಲ್ಲ ಖುಷಿಕೊಟ್ಟಿದೆ. ಈ ಪಾದಯಾತ್ರೆಯ ನೂರರ ಸಂಭ್ರಮವನ್ನು ಗಾಂಧಿ ಕಟ್ಟೆಯಲ್ಲಿ ಯುವಕಾಂಗ್ರೆಸ್ ಸದಸ್ಯರು ಆಯೋಜನೆ ಮಾಡುವ ಮೂಲಕ ಯಾತ್ರೆಯ ಉದ್ದೇಶವನ್ನು ಮತ್ತೊಮ್ಮೆ ಜನತೆಗೆ ತಿಳಿಸುವಲ್ಲಿ ಸಹಕಾರಿಯಾಗಲಿದೆ ಎಂದರು.


ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ ಇಂದು 56 ಇಂಚು ಎದೆ ಎಂದು ಬಣ್ಣ ಬಣ್ಣದ ಉಡುಪು ಧರಿಸಿ ಕೇವಲ ಮನ್ ಕೀ ಬಾತ್ ಗೆ ಅಷ್ಟೇ ಸೀಮಿತವಾಗಿರುವ ಮೋದಿಯವರ ಮಧ್ಯೆ ಭಾರತ್ ಜೋಡೊ ಯಾತ್ರೆಯ ಮೂಲಕ ಜನ್ ಕೀ ಬಾತ್ ಕೈ ಗೊಂಡು ಅಸಹಾಯಕರ ಪರವಾಗಿ ಧ್ವನಿಯೆತ್ತಿದ ರಾಹುಲ್ ಗಾಂಧಿಯವರು ನಿಜವಾದ ನಾಯಕ. ಈ ಸಂಭ್ರಮಾಚರಣೆಯ ಮೂಲಕ ನಾವೆಲ್ಲ ಅವರಿಗೆ ಬೆಂಬಲ ಸೂಚಿಸೋಣ ಎಂದರು.

ರಾಜ್ಯ ಎನ್.ಎಸ್.ಯ.ಐ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಮಲೇಶ್ ಸರ್ವೆ ದೋಳಗುತ್ತು, ಇಸಾಕ್ ಸಾಲ್ಮರ, ಸಂಶುದ್ದೀನ್ ಅಜ್ಜಿನಡ್ಕ ಸಂದರ್ಭೋಚಿತವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮಾನಾಥ್ ಶೆಟ್ಟಿ, ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ರಶಿದ್ ಮುರ , ಅಭಿಷೇಕ್ ಆಚಾರ್ಯ, ಡಿ.ಸಿ.ಸಿ ಸದಸ್ಯರಾದ ಅನ್ವರ್ ಕಾಸಿಂ, ಜಯಪ್ರಕಾಶ್ ಬದಿನಾರು, ಭಾರತ್ ಜೊಡೊ ಸಂಯೋಜಕರಾದ ನೂರುದ್ದೀನ್ ಸಾಲ್ಮರ,
ಪರಮೇಶ್ವರ್ ಬಂಡಾರಿ, ನಾಗೇಶ್ ಆಚಾರ್ಯ, ಗಂಗಾಧರ್ ಶೆಟ್ಟಿ ಎಲಿಕ, ಶಾನವಾಜ್ ಬಪ್ಪಳಿಗೆ, ಸಂಶುದ್ದೀನ್ ಅಜ್ಜಿನಡ್ಕ, ರವಿಚಂದ್ರ ಆಚಾರ್ಯ ಸಂಪ್ಯ, ಸಲೀಂ ಪಾಪು, ಶಿಯಾಬ್ ಪುರುಷರಕಟ್ಟೆ, ಖಾದರ್ ಪೋಳ್ಯ, ಮೂಸೆ ಕಬಕ, ಜಗದೀಶ್ ಕಜೆ, ರವಿಪ್ರಸಾದ್ ಶೆಟ್ಟಿ, ರೋಬಿನ್ ತಾವ್ರೋ, ಜುನೈದ್ ಸಾಲ್ಮರ, ಹಂಝತ್ ಸಾಲ್ಮರ, ಇಮ್ತಿಯಾಜ್ ಬಪ್ಪಳಿಗೆ, ಮಹೇಶ್ಚಂದ್ರ ಸಾಲಿಯಾನ್, ಇಷ್ಮಾಯಿಲ್ ಬಲ್ನಾಡ್, ಆಶಿಕ್ ಆರಂತೋಡು, ಖಾದರ್ ಪಾಟ್ರಕೋಡಿ, ದಾಮೋದರ್ ಭಂಡಾರ್ಕರ್, ಉನೈಸ್ ಗಡಿಯಾರ, ದಾಮೋದರ‌ ಕಬಕ
ಉಪಸ್ಥಿತರಿದ್ದರು‌. ಯುವಕಾಂಗ್ರೆಸ್ ಉಪಾಧ್ಯಕ್ಷ‌‌ ಹನೀಫ್ ಪುಂಚತ್ತಾರ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here