ಬಡಗನ್ನೂರುಃ ವಿದ್ಯುತ್ ಬಳಕೆದಾರರ ಅದಾಲತ್

0

ಬಡಗನ್ನೂರುಃ ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ವಿದ್ಯುತ್ ಬಳಕೆದಾರರ ಅದಾಲತ್ ದ. 17 ರಂದು ಬಡಗನ್ನೂರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಗ್ರಾಮಾಂತರ ಅಭಿಯಂತರರಾದ ವಸಂತ ಕುಮಾರ್ ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸುವುದು ಈ ಸಭೆಯ ಉದ್ದೇಶ. ಪ್ರತಿ ತಿಂಗಳ 3 ನೇ ಶನಿವಾರ ನಡೆಸುವ ಬಗ್ಗೆ ಭಾರತ್ ಸರ್ಕಾರ ಅದೇಶ ನೀಡಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ  ಸಮಸ್ಯೆಗಳ ಬಗ್ಗೆ  ಮಾಹಿತಿ ನೀಡಿದಲ್ಲಿ   ಶ್ರೀಘ್ರದಲ್ಲಿ  ಬಗೆಹರಿಸಲಾಗುದು ಎಂದ ಅವರು ವಿದ್ಯುತ್ ಮಿತವಾಗಿ ಬಳಕೆ ಮಾಡಬೇಕು.  ಯಾವ ಉದ್ದೇಶಕ್ಕಾಗಿ ವಿದ್ಯುತ್ ಪಡೆದುಕೊಳ್ಳುತ್ತೀರಾ ಅದೇ ಉದ್ದೇಶಕ್ಕಾಗಿ ಬಳಕೆಮಾಡಬೇಕು  ಅನಧಿಕೃತವಾಗಿ ಬಳಕೆ ಮಾಡುವುದು ಅಪಾರಧ,  ಅನುಮತಿ ಇಲ್ಲದೆ ವಿದ್ಯುತ್ ಬಳಕೆ ಮಾಡುವುದು ಕಳ್ಳತನ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ  ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಉಪಾಧ್ಯಕ್ಷ ಸಂತೋಷ್ ಆಳ್ವ,  ಸಹಾಯ ಇಂಜಿನಿಯರ್ ಗುರುದೇವಿ ಯಂ, ಗ್ರಾ.ಪಂ ಅಭಿವೃದ್ಧಿ ವಸೀಮ ಗಂಧದ, ಈಶ್ವರಮಂಗಲ ಜೆಇ ರಮೇಶ್, ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಲಿಂಗಪ್ಪ ಗೌಡ ಮೋಡಿಕೆ, ಕುಮಾರ್ ಅಂಬಟೆಮೂಲೆ, ಸುಜಾತ ಯಂ, ಸುಶೀಲ ಪಕ್ಯೋಡು ಹಾಗೂ ಎರಡು ಗ್ರಾಮದ ಲೈನ್ ಮಾನ್ ಗಳು, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಕೃಷಿ ಯಂತ್ರಗಳಿಗೆ ವಿದ್ಯುತ್ ಬಳಕೆಗೆಮಾಡುವ ಸಂದರ್ಭದಲ್ಲಿ ಅನುಮತಿ ಪಡೆದು ಪ್ರತ್ಯೇಕವಾಗಿ ವಿದ್ಯುತ್ ಪಡೆದು ಕೊಳ್ಳಬೇಕು. 1 ಹೆಚ್ ಪಿ ಗೆ 1900, ಹಾಗೂ ಅಭಿವೃದ್ಧಿ ಫೀಸ್ 10,000 ರೂ ಇಲಾಖೆಗೆ  ಪಾವತಿಸಿ ಅನುಮತಿ ಪಡೆದು ಕೊಳ್ಳಬೇಕು 
 ಮನೆಯ ವಿದ್ಯುತ್, ಬಿಲ್, ಪಂಪ್, ಪೀಡರ್ ಸಮಸ್ಯೆ ಸಂದರ್ಭದಲ್ಲಿ 19092  ಸಹಾಯವಾಣಿ  ಕರೆಮಾಡತಕ್ಕದ್ದು   ಸುರಕ್ಷತಾ ನಿಟ್ಟಿನಲ್ಲಿ ಯಾವುದೇ ಸಂದರ್ಭದಲ್ಲಿ ಇಲಾಖಾ ಪ್ರತಿನಿಧಿಗಳು ಇಲ್ಲದೆ ವಿದ್ಯುತ್ ಲೈನ್ ಸಮಸ್ಯೆ ಸರಿಪಡಿಸುವುದು, ಮರ ಕಡಿಯುವುದು ಮಾಡತಕ್ಕದ್ದು  .

LEAVE A REPLY

Please enter your comment!
Please enter your name here