ನರಿಮೊಗರು ಶಾಲಾ ಪರಿಸರದಲ್ಲಿ ಅಡಿಕೆ ಸಸಿ ನೆಡುವ ಕಾರ್ಯಕ್ರಮ

0

ಪುತ್ತೂರು: ನರಿಮೊಗರು ಹಿ.ಪ್ರಾ. ಶಾಲೆಯಲ್ಲಿ ಎಸ್‌ಡಿಎಂಸಿ ವತಿಯಿಂದ ಶಾಲಾ ಪರಿಸರದಲ್ಲಿ ಅಡಿಕೆ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಎಲ್‌ಕೆಜಿ ಮತ್ತು ಯುಕೆಜಿ ತರಗತಿ ವಿದ್ಯಾರ್ಥಿಗಳ ಗ್ರೀನ್ ಡೇ ಆಚರಣೆಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವು ಎಸ್‌ಡಿಎಂಸಿಯವರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಆಯೋಜಿಸಲಾಗಿತ್ತು. 150 ಅಡಿಕೆ ಗಿಡಗಳನ್ನು ಎಲ್‌ಕೆಜಿ ವಿದ್ಯಾರ್ಥಿ ಹಸ್ಮಿತ್‌ರವರ ಪೋಷಕರಾದ ಪ್ರವೀಣ್ ಪೂಜಾರಿ ಹಾಗೂ ಶ್ರೀಲತಾರವರು ನೀಡಿದ್ದರು.

ಈ ಗಿಡಗಳಿಗೆ ನೀರಾವರಿಗಾಗಿ 10000 ಮೌಲ್ಯದ ಡ್ರಿಪ್ಸ್ ವ್ಯವಸ್ಥೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಉಮೇಶ್ ಕರ್ಕೇರಾ ಕೈಪಂಗಳರವರು ನೀಡಿದರು. ಹಿರಿಯ ಕೃಷಿಕರಾದ ವೆಂಕಟರಮಣ ಭಟ್‌ರವರು ಹರಳಿಂಡಿ ಮತ್ತು ಯು ಪಿ ಶರೀಫ್ ಪುರುಷರಕಟ್ಟೆಯವರು ಭತ್ತದ ಹುಡಿಯನ್ನು ನೀಡಿದರು. ಈ ಸಂಪನ್ಮೂಲ ಕ್ರೋಢೀಕರಣದ ಜವಾಬ್ದಾರಿಯನ್ನು ಜಿಲ್ಲಾ ಎಸ್‌ಡಿಎಂಸಿ ಸಮಿತಿ ಸದಸ್ಯ ಪ್ರವೀಣ್ ಆಚಾರ್ಯ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾರವರು ನಿರ್ವಹಿಸಿದರು.

ಕಾರ್ಯಕ್ರಮದ ಆಯೋಜಕರಾದ ಎಲ್‌ಕೆಜಿ ಶಿಕ್ಷಕಿ ಸ್ನೇಹಲತಾ ಮತ್ತು ದಿವ್ಯರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ್ ಜೈನ್, ಪ್ರಗತಿಪರ ಕೃಷಿಕ ಉಮೇಶ್ ಕರ್ಕೆರ, ವಿವೇಕಾನಂದ ಭಟ್, ಸುಭಾಷ್ ಚಂದ್ರ ಶೆಣೈ, ಸಲೀಂ ಮಾಯಂಗಳ, ಜಗದೀಶ್, ವಿಠಲ್ ಶೆಟ್ಟಿ, ಮಹಮ್ಮದ್ ಹಾಜಿ ದರ್ಖಾಸು, ನಾಸಿರ್ ನೆಕ್ಕಿಲು, ಫಾರೂಕ್ ಇಂದಿರಾನಗರ, ರಮೇಶ್ ನರಿಮೊಗರು, ಉಮ್ಮರ್ ಕಾಳಿಂಗಹಿತ್ತಲು, ಲವ ಕುಮಾರ್, ಎಸ್‌ಡಿಎಂಸಿ ಮಾಜಿ ಉಪಾಧ್ಯಕ್ಷೆ ಲಕ್ಷ್ಮಿ ಹಾಗೂ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here