ಪುತ್ತೂರು: ಜೀವ ರಕ್ಷಕ ಆಟಗಳಲ್ಲಿ ಲೈಫ್ ಸೇವಿಂಗ್ ಗೇಮ್ಸ್ ಪ್ರತಿಷ್ಠಿತವೆನಿಸಿದೆ. ಪುಣೆ ಬಾಲೆವಾಡಿಯ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಲೈಫ್ ಸೇವಿಂಗ್ ಗೇಮ್ಸ್-2022 ಲೈಫ್ ಸೇವಿಂಗ್ (ಜೀವ ರಕ್ಷಕ) ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಧನ್ವಿ ಜೆ. ರೈಯವರು 50ಮೀ. manikin carry – ಪ್ರಥಮ, 100ಮೀ manikin tow -ದ್ವಿತೀಯ ಮತ್ತು 100 ಮೀ obstacle swim – ತೃತೀಯ ಸ್ಥಾನ ಗಳಿಸಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
ಧನ್ವಿ ಜೆ. ರೈಯವರು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಸಂತ ಫಿಲೋಮಿನಾ ಹೈಸ್ಕೂಲ್ ಹಾಗೂ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಪುತ್ತೂರು ಎನ್.ಜೆ ರೈ ಮತ್ತು ಮಲ್ಲಿಕಾ ಜೆ. ರೈ ದಂಪತಿ ಪುತ್ರಿ