ಡಿ.21ರಂದು ಹೊಸದೆಹಲಿಯಲ್ಲಿ ಪ್ರಶಸ್ತಿ ಸ್ವೀಕಾರ
ಬೆಂಗಳೂರು: ಕೇಂದ್ರ ಸರಕಾರ ನೀಡುವ 2022ನೇ ಸಾಲಿನ ಅಟಲ್ ಸಾಧನಾ ಪುರಸ್ಕಾರ ಪುತ್ತೂರಿನ ನರಿಮೊಗರಿನಲ್ಲಿರುವ ಎಸ್.ಜಿ ಕಾರ್ಪೊರೆಟ್ಸ್ ಸಮೂಹದ ಮೇಘಾ ಪ್ರೊಸೆಸಿಂಗ್‌ನ ಬಿಂದು ಸಮೂಹ ಸಂಸ್ಥೆಗೆ ಲಭಿಸಿದೆ.
ಆಹಾರ ಉತ್ಪನ್ನಗಳ ತಯಾರಿಕಾ ಘಟಕ ವಿಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಅವಕಾಶ ಮತ್ತು ಗ್ರಾಮೀಣ ಭಾಗದ ಆರ್ಥಿಕ ಸಂಚಲನಕ್ಕಾಗಿ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಉಕ್ಕು ಸಚಿವಾಲಯ, ಆಹಾರ ನಿರ್ವಹಣಾ ಕೈಗಾರಿಕಾ ಸಚಿವಾಲಯ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವಾಲಯವು ಪುರಸ್ಕಾರವನ್ನು ನೀಡುತ್ತಿದೆ. ಡಿ.21ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಬಿಂದು ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ್‌ರವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಮಾರಂಭದಲ್ಲಿ ರಾಜ್ಯದ ರಾಜ್ಯಪಾಲ ಥಾವರ್‌ಚಂದ್ ಗೆಲ್ನೋಟ್, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲ್, ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಾಗನ್ ಸಿಂಗ್ ಕುಲಸ್ತೆ, ನಿರ್ವಹಣಾ ಕೈಗಾರಿಕಾ ಸಚಿವ ಪಶುಪತಿ ಕುಮಾರ್ ಉಪಸ್ಥಿತರಿರಲಿದ್ದಾರೆ.
ಪುತ್ತೂರಿನ ನೆರಿಮೊಗರಿನಲ್ಲಿರುವ ಎಸ್.ಜಿ ಸಮೂಹ ಸಂಸ್ಥೆ ಗ್ರಾಮ ಮಟ್ಟದಲ್ಲಿ ಆರಂಭಗೊಂಡು ಇಂದು 750 ಕೋಟಿ ರೂ. ವಾರ್ಷಿಕ ವ್ಯವಾಹರ ಮಾಡುತ್ತಿದೆ. 2025 ವೇಳೆಗೆ 1,೦೦೦ ಕೋ.ರೂ. ವ್ಯವಹಾರದ ಗುರಿ ಹಾಕಿಕೊಂಡಿದೆ.
ಸಂಸ್ಥೆಯು 40ಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ಬಿಂದು ಜೀರಾ ಫಿಜ್, ಬಿಂದು ಲೆಮೆನ್, ಸಿಪ್ ಅನ್ ಮ್ಯಾಂಗೊ, ಮ್ಯಾಂಗೋ ಮಿಲ್ಕ್‌ಶೇಕ್, ಲೆಮೆನ್ ವಿದ್ ಮಿಂಟ್, ಆಪಲ್, ಪೇರಳೆ, ಲಿಚ್ಚಿ, ದಾಳಿಂಬೆ, ಪುನರ್ಪುಳಿ, ಸ್ಟ್ರಾಬೆರಿ, ಪ್ರೋಝನ್ ಬ್ರಾಂಡ್‌ನಲ್ಲಿ ಗ್ರೀನ್ ಆಪಲ್, ಆರೇಂಜ್, ಆಪಲ್, ಶುಂಠಿ, ಸ್ಟ್ರಾಬೆರಿ, ಝಿವೊ ಬ್ರಾಂಡ್‌ನಲ್ಲಿ ಸೋಡಾ, ಕೋಲಾ, ಸ್ಪ್ಯಾಕ್‌ಅಪ್‌ನಲ್ಲಿ 15 ಬಗೆಯ ತಿಂಡಿಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ.