ಕಾಣಿಯೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಸವಣೂರು ಸೆಂಟರ್ ವ್ಯಾಪ್ತಿಯ ಕೂರತ್ ಬ್ರಾಂಚ್ ಇಸಾಬಾ ತಂಡದ ವತಿಯಿಂದ ಶೈಖ್ ರಿಫಾಯಿ (ರ ಅ )ರವರ ಸ್ಮರಣಾರ್ಥ ಸ್ವಚ್ಛತಾ ಮಾಸಾಚರಣೆ ಪ್ರಯುಕ್ತ ಪರಿಸರ ಸ್ವಚ್ಛತೆ ಅಭಿಯಾನ ಹಮ್ಮಿಕೊಂಡು ಕುದ್ಮಾರು ಬಸ್ ತಂಗುದಾಣ ಹಾಗೂ ಪರಿಸರವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ನಡೆಯಿತು.
ಸೆಂಟರ್ ಸಾಂತ್ವನ ಕಾರ್ಯದರ್ಶಿ ಯೂಸುಫ್ ಬಯಂಬಾಡಿ, ಸೋಶಿಯಲ್ ಕಾರ್ಯದರ್ಶಿ ಎಸ್ ಇ ಅಬ್ದುಲ್ಲಾ, ಇಸಾಬ ಅಮೀರ್ ಅಬೂಬಕ್ಕರ್ ಪಾಳಿಲಿ, ಸವಣೂರು ಬ್ರಾಂಚ್ ಇಸಾಬ ಅಮೀರ್ ಇಕ್ಬಾಲ್ ಕೇಕುಡೆ, ಕೂರತ್ ಜಮಾಅತ್ ಅದ್ಯಕ್ಷ ಅಬೂಬಕ್ಕರ್ ಕೂರತ್, ಕಾರ್ಯದರ್ಶಿ ಸುಲೈಮಾನ್ ಅನ್ಯಾಡಿ, ರಝಾಕ್ ಮೇಸ್ತ್ರಿ, ಎಸ್ ವೈ ಎಸ್ ಅದ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಜಬ್ಬಾರ್, ಇಸಾಬ ಅಮೀರ್ ಹನೀಫ್ ಹಾಗೂ ಎಸ್ ಎಸ್ ಎಫ್ ಕೂರತ್ ಬ್ರಾಂಚ್ ಅಧ್ಯಕ್ಷ ನೌಶಾದ್ ಹಾಗೂ ಎಸ್ ಎಸ್ ಎಫ್,ಎಸ್ ವೈ ಎಸ್ ಕಾರ್ಯಕರ್ತರು ಭಾಗವಹಿಸಿದ್ದರು.