ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್‌ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪದವಿ ಪೂರ್ವ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಅಂತರ್-ಕಾಲೇಜು ಫೆಸ್ಟ್ ‘ಅಟೆರ್ನಸ್’ ದ.23 ರಂದು ಜರಗಲಿದೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಡಿಡಿಪಿಐ ಜಯನ್ನ ಸಿ.ಡಿರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿರವರು ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ|ಕಿಶೋರ್ ಕುಮಾರ್ ಸಿ.ಎಚ್, ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಅಶೋಕ್ ಕುಮಾರ್ ರೈಯವರು ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ವ್ಯವಸ್ಥಾಪಕಿ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕಾರ್ಯಕ್ರಮದ ಕನ್ವೀನರ್ ಸತೀಶ್ ನಾಯ್ಕ್ ಸಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವೆಂಟ್‌ಗಳು..
*ಪೈಂಟಿಂಗ್ *ಪೇಪರ್ ಔಟ್‌ಫಿಟ್
*ಏಕವ್ಯಕ್ತಿ ಗಾಯನ *ಸ್ಟ್ಯಾಂಡ್‌ಅಪ್ ಕಾಮಿಡಿ
*ಮಾತುಗಾರಿಕೆ *ಉತ್ಪನ್ನ ಬಿಡುಗಡೆ
*ಸಮೂಹ ಗಾಯನ *ಕಸದಿಂದ ರಸ
*ಅಣಕು ಪ್ರದರ್ಶನ *ಕ್ವಿಜ್
ಬಹುಮಾನಗಳು..
ಪ್ರಥಮ-ರೂ.12 ಸಾವಿರ, ದ್ವಿತೀಯ-ರೂ.10 ಸಾವಿರ, ತೃತೀಯ-ರೂ.8 ಸಾವಿರ ಮತ್ತು ಪ್ರತಿ ಇವೆಂಟ್‌ನಲ್ಲಿ ವೈಯಕ್ತಿಕ ಬಹುಮಾನಗಳು ಹಾಗೂ ಪ್ರಶಸ್ತಿಯನ್ನು ನೀಡಲಾಗುತ್ತದೆ.