ಅಮೃತ ಸ್ವ ಸಹಾಯ ಕಿರು ಉದ್ದಿಮೆ ಯೋಜನೆಯಡಿ ಅಯ್ಕೆಯಾಗಿರುವ ಸ್ವಸಹಾಯ ಸಂಘಗಳಿಗೆ ಬೀಜ ಧನ ಯೋಜನೆಯಡಿ ಉದ್ಯಮಶೀಲತಾ ತರಬೇತಿ – ಉದ್ಘಾಟನೆ

0

ತರಬೇತಿ ಪಡೆದು ಬೃಹತ್ ಉದ್ದಿಮೆದಾರರಾಗಿ- ಸುಕನ್ಯ
ಸ್ತ್ರೀ ಶಕ್ತಿಯಲ್ಲಿ 20ಸಾವಿರಕ್ಕೂ ಮೇಲ್ಪಟ್ಟು ಸದಸ್ಯರು – ಶ್ರೀಲತಾ

ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ಶಿಶು ಅಭಿವೃದ್ದಿ ಯೋಜನೆ, ತಾಲೂಕು ಪಂಚಾಯತ್ ಪುತ್ತೂರು ಇದರ ವತಿಯಿಂದ ಅಮೃತ ಸ್ವ ಸಹಾಯ ಕಿರು ಉದ್ದಿಮೆ ಯೋಜನೆಯಡಿ ಆಯ್ಕೆಯಾಗಿರುವ ಸ್ವಸಹಾಯ ಸಂಘಗಳಿಗೆ ಬೀಜ ಧನ ಯೋಜನೆಯಡಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಡಿ.20ರಂದು ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು. ತಾ.ಪಂ ಯೋಜನಾಧಿಕಾರಿ ಸುಕನ್ಯ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.

ತರಬೇತಿ ಪಡೆದು ಬೃಹತ್ ಉದ್ದಿಮೆದಾರರಾಗಿ:

ತಾ.ಪಂ ಯೋಜನಾಧಿಕಾರಿ ಸುಕನ್ಯ ಅವರು ಮಾತನಾಡಿ ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ಗೊತ್ತು ಮಾಡಲು ಹಲವಾರು ಯೋಜನೆಯನ್ನು ಸರಕಾರ ತರುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಕೇವಲ ವೈಯಕ್ತಿಕವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ, ಸಂಘದ ಮೂಲಕ ಆರ್ಥಿಕ ಸಬಲತೆಯನ್ನು ಹೊಂದಬೇಕು. ನಿಮ್ಮ ಸಂಘಗಳಿಗೆ ಯೋಜನೆ ಮಂಜೂರು ಮಾಡಲು ಗೈಡ್ ಲೈನ್ ಪ್ರಕಾರ ಪ್ರೋಜೆಕ್ಟ್ ಮಾಡಬೇಕು. ಅದಕ್ಕಾಗಿ ಈ ತರಬೇತಿ ಪ್ರಾಮುಖ್ಯ. ಈ ನಿಟ್ಟಿನಲ್ಲಿ ತರಬೇತಿ ಪಡೆದುಕೊಂಡಷ್ಟು ನಮ್ಮ ಬೆಳವಣಿಗೆಗೆ ಅಗತ್ಯ. ಮುಂದೆ ಕಿರು ಉದ್ಯಮದ ತರಬೇತಿ ಪಡೆದು ಬೃಹತ್ ಉದ್ದಿಮೆದಾರಾಗಿ ಎಂದರು.

ಸ್ತ್ರೀ ಶಕ್ತಿಯಲ್ಲಿ 20ಸಾವಿರಕ್ಕೂ ಮೇಲ್ಪಟ್ಟು ಸದಸ್ಯರು:

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಮೃತ್ ಯೋಜನೆಯಡಿಯಲ್ಲಿ ಬೀಜ ಧನ ಸಹಾಯ ಪಡೆದ ಫಲಾನುಭವಿ ಮಹಿಳಾ ಸ್ವ-ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ. ವಿವಿಧ ಆರ್ಥಿಕ ಚಟುವಟಿಕೆಗಳನ್ನು ಸಂಘದ ಮೂಲಕ ಕೈಗೊಂಡಾಗ ಆರ್ಥಿಕವಾಗಿ ಸಬಲತೆ ಹೊಂದುವುದರೊಂದಿಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಯನ್ನು ಜಾರಿಗೆ ತರುತ್ತಿದೆ. ಪುತ್ತೂರು ಕಡಬ ಸೇರಿ 200ಕ್ಕೂ ಅಧಿಕ ಸ್ತ್ರೀ ಶಕ್ತಿ ಗುಂಪುಗಳಿವೆ. ಅದರಲ್ಲಿ 20ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬಿನ್, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಮಮತಾಂಜಲಿ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಜಲಜಾಕ್ಷಿ ವಂದಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here