ಪತ್ತೂರು : ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆ ಜೆಸಿಐ ನ ವಲಯ 15ರ ಪ್ರತಿಷ್ಠಿತ ಘಟಕ ಜೆಸಿಐ ವಿಟ್ಲದ 2023ನೇ ಸಾಲಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಇತ್ತೀಚೆಗೆ ವಿಟ್ಲದ ಲಯನ್ ಸೇವಾ ಭವನ ಒಕ್ಕೆತ್ತೂರಿನಲ್ಲಿ ಜರುಗಿತು.
ಘಟಕದ 43ನೇ ಅಧ್ಯಕ್ಷರಾಗಿ JFD.ಪರಮೇಶ್ವರ ಹೆಗಡೆ 2022ನೇ ಸಾಲಿನ ಅಧ್ಯಕ್ಷ ಜೆಸಿ ಚಂದ್ರಹಾಸ ಕೊಪ್ಪಳ ರವದಿಂದ ಅಧಿಕಾರ ಸ್ವೀಕರಿಸಿದರು.
ಕಾರ್ಯದರ್ಶಿಯಾಗಿ ಜೆಸಿ.ದೀಕ್ಷಿತ್, ಲೇಡಿ ಜೆಸಿ ಸಂಯೋಜಕಿಯಾಗಿ ಜೆಸಿ ಕವಿತಾ ಪರಮೇಶ್ವರ ಹೆಗಡೆ, ಜೆಜೆಸಿ ಅಧ್ಯಕ್ಷರಾಗಿ ಜೆಜೆಸಿ ತೇಜಸ್ ಹಾಗೂ ವಿವಿಧ ಪದಾಧಿಕಾರಿಗಳು ಘಟಕಾಧ್ಯಕ್ಷರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನಿಕಟಪೂರ್ವಾಧ್ಯಕ್ಷರಾದ ಜೆಸಿ ಚಂದ್ರಾಹಾಸಶೆಟ್ಟಿಯವರನ್ನು ಸನ್ಮಾನಿಸಿ ಪೂರ್ವಾಧ್ಯಕ್ಷರ ಸಾಲಿಗೆ ಸೇರ್ಪಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ.ಪವನ್ ಕಿರಣ್ ಕೆರೆ ಮಾತನಾಡಿ, ಪ್ರಪಂಚದಲ್ಲಿ ಅತ್ಯಂತ ಬೆಲೆಬಾಳುವ ಅಂಶವೆಂದರೆ ಮಾನವನ ವ್ಯಕ್ತಿತ್ವ.ಅಂತಹ ವ್ಯಕ್ತಿತ್ವ ರೂಪಿಸುವುದು ಜೆಸಿಐ ಸಂಸ್ಥೆ. ಯುವಕರು ಇಂತಹ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಕೊಳ್ಳಬೇಕೆಂದು ಕರೆಕೊಟ್ಟರು.
ಮತ್ತೋರ್ವ ಅತಿಥಿ ವಲಯಾಧ್ಯಕ್ಷ ಜೆಸಿ ಪುರುಷೋತ್ತಮ ಶೆಟ್ಟಿ 2023 ನೇ ಸಾಲಿನ ತಂಡಕ್ಕೆ ಶುಭಕೋರಿದರು. ವಲಯ ಉಪಾಧ್ಯಕ್ಷರಾದ ಜೆಸಿ ಅಜೀತ್ ಕುಮಾರ್ ರೈ ಪದಗ್ರಹಣದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ವಿಟ್ಲ ಘಟಕಕ್ಕೆ ನೂತನ ಸದಸ್ಯರಾಗಿ ಜೆಸಿ.ಪ್ರವೀಣ್ ಸಾಲಿಯಾನ್,ಜೆಸಿ ಖುಷಿ ರೈ,ಜೆಸಿ ಸ್ಮಿತಾ ರೈ,ಜೆಸಿ ಶ್ರೀನಿಧಿ ಕುಕ್ಕಿಲ,ಜೆಸಿ ನವೀನ್ ಗೌಡ,ಜೆಸಿ ಪುನೀತ್ ಪಕ್ಕಳ,ಜೆಸಿ ಹರ್ಷಿತಾ ಅಭಿಷೇಕ್ ರವರು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಘಟಕದ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ,ಶಿಕ್ಷಣ ಇಲಾಖೆಯ ಹಾಗೂ ವಿಟ್ಲ ಪರಿಸರದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಸದಸ್ಯರುಗಳಾದ ಜೆಸಿ ರಾಜೀವ್,ಜೆಸಿ ಅನಿಲ್ ವಡಗೇರಿ,ಜೆಸಿ ಜೆಸನ್ ಪಿಂಟೋ,ಜೆಸಿ ಸಾರಿಕಾ ಚಂದ್ರಹಾಸ ಶೆಟ್ಟಿ,ಜೆಸಿ ವಿಯೋನ್ ರಾಬಿನ್,ಜೆಸಿ ಹೇಮಲತಾ ಜೈಕಿಶನ್,ಜೆಸಿ ಹರ್ಷಿತ್,ಜೆಸಿ ಅಭಿಷೇಕ್,ಜೆಸಿ ಅರುಣ್, ಜೆಸಿ ಸಂದೀಪ್,ಜೆಸಿ ರಿತೇಶ್ ಶೆಟ್ಟಿ, ಜೆಸಿ ಅಶ್ವಿನಿ ದಿನೇಶ್, ಜೆಸಿ ಕ್ಲಿಫರ್ಡ್ ವೇಗಸ್ ರವರುಗಳು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.