ಕಾರ್ಯಕರ್ತರು ಪಕ್ಷದ ತಾಯಿ ಬೇರಿದ್ದಂತೆ, ಕಡೆಗಣಿಸಬಾರದು: ಕಾವು ಹೇಮನಾಥ ಶೆಟ್ಟಿ
ಪುತ್ತೂರು; ಕಾರ್ಯಕರ್ತರಿದ್ದರೆ ಮಾತ್ರ ಪಕ್ಷ ಉಳಿಯಬಹುದು, ಕಾರ್ಯಕರ್ತರಿಂದಲೇ ಎಲ್ಲವೂ ನಡೆಯುತ್ತದೆ, ಕಾರ್ಯಕರ್ತರು ಪಕ್ಷದ ತಾಯಿ ಬೇರಿದ್ದಂತೆ ಅವರನ್ನೂ ಯಾವತ್ತೂ ಕಡೆಗಣಿಸಬಾರದು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ದ.21 ರಂದು ಬೈಪಾಸ್ ಅಶ್ಮಿ ಸಭಾಭವನದಲ್ಲಿ ಹೇಮನಾಥ ಶೆಟ್ಟಿ ಅಭಿಮಾನಿ ಬಳಗ ಪುತ್ತೂರು ಇವರು ಆಯೋಜಿಸಿದ್ದ ಕೆಪಿಸಿಸಿ ಸಂಯೋಜಕ, ಬಂಟರಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರ 58 ನೇ ಹುಟ್ಟು ಹಬ್ಬ ಸಂಭ್ರಮದ ಪ್ರಯುಕ್ತ 58 ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸನ್ಮಾನ ಮಾಡಿ ಮಾತನಾಡಿದರು.
ಪಕ್ಷವನ್ನು ಕಟ್ಟಿ ಬೆಳೆಸಿ, ಉಳಿಸುವಲ್ಲಿ ಸಾವಿರಾರು ಮಂದಿ ಹಿರಿಯ ಕಾರ್ಯಕರ್ತರ ಶ್ರಮವಿದೆ, ಹಗಲಿರುಳೆನ್ನದೆ ಪಕ್ಷಕ್ಕಾಗಿ ತನ್ನ ಆಯುಷ್ಯವನ್ನೇ ಮುಡಿಪಾಗಿಟ್ಟ ಕಾರ್ಯಕರ್ತರಿಂದಾಗಿ ಇಂದು ಪಕ್ಷ ಅಸ್ತಿತ್ವದಲ್ಲಿದೆ ಅದನ್ನು ನಾವು ಯಾವತ್ತೂ ಮರೆಯಬಾರದು ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ನೀಡುವ ಕೆಲಸ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.
ಚುನಾವಣೆ ಬಂಧಾಗ ಮಾತ್ರ ನಾವು ಹಿರಿಯ ಕಾರ್ಯಕರ್ತರನ್ನು ಹುಡುಕುವ ಕೆಲಸ ಮಾಡಬರದು, ಅವರ ಶ್ರಮಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ, ಯಾವ ಕಾರಣಕ್ಕೂ ನಾಯಕರಾದವರು ಕಾರ್ಯಕರ್ತರ ಮನಸ್ಸಿಗೆ ನೋವು ನೀಡುವ ಕೆಲಸವನ್ನು ಮಾಡಬಾರದು ಹಾಗೇ ಮಾಡಿದಲ್ಲಿ ಅದು ದೇವರು ಮೆಚ್ಚುವ ಕೆಲಸವಲ್ಲ ಎಂದು ಹೇಳಿದರು. 58 ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು 58 ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಮಾಡುತ್ತಿದ್ದು ಇದು ರಜಕೀಯ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಹಿರಿಯ ಕಾರ್ಯಕರ್ತರನ್ನು ಹುಡುಕಿ ಅವರನ್ನು ಗೌರವಿಸುವ ಕೆಲಸವನ್ನು ಮಾಡಬೇಕಿದೆ. ಪಕ್ಷಕ್ಕಾಗಿ ಪ್ರಾಮಾಣಿಕ, ನಿಶ್ವಾರ್ಥ ಸೇವೆ ಸಲ್ಲಿಸಿದ ಯಾವುದೇ ಕಾರ್ಯಕರ್ತನಿಗೆ ನೋವು ಕೊಡುವ ಕೆಲಸ ಯಾರಿದಂಲೂ ಆಗಬಾರದು ಎಂದು ಹೇಳಿದರು.
ಸರ್ವಧರ್ಮಿಯರ ಪ್ರೀತಿಗೆ ಪಾತ್ರರಾಗಿದ್ದಾರೆ: ಲ್ಯಾನ್ಸಿ ಮಸ್ಕರೇನಸ್
ಕಾವು ಹೇಮನಾಥ ಶೆಟ್ಟಿಯವರು ಕಾಂಗ್ರೆಸ್ ಪಕ್ಷದ ಓರ್ವ ನಿಷ್ಠಾವಂತ ನಾಯಕರಾಗಿದ್ದು ಎಲ್ಲಾ ಧರ್ಮಿಯವರ ಪ್ರೀತಿಗೆ ಪಾತ್ರರಾದವರಾಗಿದ್ದಾರೆ. ಕಷ್ಟ ಕಾಲದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ.ತನ್ನ ಬಳಿ ನಿತ್ಯ ಬರುವ ನೂರಾರು ಮಂದಿಗೆ , ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಕುಟುಂಬವನ್ನು ಬೆಳಗಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಇಂದು ಅವರ ಜನ್ಮ ದಿನದಂದೇ ಹಲವು ಮಂದಿ ಹಿರಿಯರ ಮನಸ್ಸಿಗೆ ತೃಪ್ತಿ ಕೊಡುವ ಕೆಲಸವನ್ನು ಮಾಡುತ್ತಿರುವುದು ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಕಾರ್ಯವಾಗಿದೆ. ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಕಾರ್ಯಕರ್ತರಿಗೆ ಗೌರವ ಕೊಡಿ ಎಂದು ಹೇಳುತ್ತಲೇ ಇದ್ದು ಆ ಕೆಲಸ ದ ಕ ಜಿಲ್ಲೆಯಲ್ಲಿ ಮೊದಲು ಎಂಬಂತೆ ಪುತ್ತೂರಿನಲ್ಲಿ ಆರಂಭಗೊಂಡಿದೆ. ಹಿರಿಯ ಕಾರ್ಯಕರ್ತರಿಗೆ ಗೌರವ ಕೊಡುವ ಕಾರ್ಯ ಹೀಗೇ ಮುಂದುವರೆಯಲಿ ಎಂದು ಹೇಳಿದ ಅವರು ಹೇಮನಾಥ ಶೆಟ್ಟಿಯವರ ಮನೆಯಲ್ಲಿ ಜನ ತುಂಬಿದ್ದರೆ ಅವರ ಮನಸ್ಸಲ್ಲೂ ಜನ ತುಂಬಿದ್ದಾರೆ ಎಂದು ಹೇಳಿದರು.
ಅಧಿಕಾರವಿಲ್ಲದೇ ಇದ್ದರೂ ಜನನಾಯಕರಾಗಿದ್ದಾರೆ: ಶ್ರೀಪ್ರಸಾದ್ ಪಾಣಾಜೆ
ಕಾವು ಹೇಮನಾಥ ಶೆಟ್ಟಿಯವರು ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಮಟ್ಟದ ನಾಯಕರಾಗಿದ್ದಾರೆ, ಯಾವುದೇ ಸಾಂವಿಧಾನಿಕ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಅವರು ಜನನಾಯಕರಾಗಿ ಮೆರೆಯುತ್ತಿರುವುದು ಅವರಿಗೆ ಜನಸಾಮಾನ್ಯನ ಆಶೀರ್ವಾದ ಇದೆ ಎಂಬುದು ಸಾಭೀತಾಗಿದೆ.ಅನೇಕ ಸಮಸ್ಯೆಗಳನ್ನು ಹೊತ್ತುಕೊಂಡು ಯಾರೇ ಮನೆಗೆ ಬಂದರೂ ಅಂತೌರಿಗೆ ನ್ಯಾಯ ಮತ್ತು ಸಾಂತ್ವನ ನೀಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಮಾಡುತ್ತಿರುವುದು ಮಾದರೀ ಕಾರ್ಯಕ್ರಮವಾಗಿದೆ. ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರ ಇರುವಿಕೆಯನ್ನು ಜನ ಬಯಸುವಂತಾಗಿದ್ದು ಅವರ ನಾಯಕತ್ವದ ಗುಣದಿಂದಲೇ ಆಗಿದೆ ಎಂದು ಪುತ್ತೂರು ಬ್ಲಾಕ್ ಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಹೇಳಿದರು. ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅವರಿಗೆ ಉತ್ತಮ ಅವಕಾಶಗಳು ಮೂಡಿಬರಬೇಕಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೆ ಗೌರವ ನೀಡಿದ್ದು ಉತ್ತಮ ಕಾರ್ಯ: ಫಾರೂಕ್ ಬಾಯಬೆ
ಜನರ ಏಳಿಗೆಗಾಗಿ ಸದಾ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕಾವು ಹೇಮನಾಥ ಶೆಟ್ಟಿಯವರು ತನ್ನ ಹುಟ್ಟು ಹಬ್ಬವನ್ನು ಕಾರ್ಯಕರ್ತರಿಗೆ ಸನ್ಮಾನ ಮಾಡಿ ಆಚರಣೆ ಮಾಡಿದ್ದು ಉತ್ತಮ ಕಾರ್ಯವಾಗಿದೆ ಎಂದು ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ದೀರ್ಘ ಕಾಲದ ರಾಜಕೀಯದಲ್ಲಿ ಜನರ ನಡುವಿನ ಸಮಸ್ಯೆಗಳಿಗೆ ಸದಾ ಸಪಂದಿಸುವ ಮೂಲಕ ಅವರು ನಿಜವಾದ ಜನ ನಾಯಕ ಎನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಜನರ ಸೇವೆ ಮಾಡುವ ಅವಕಾಶ ಅವರಿಗೆ ಒದಗಿ ಬರಲಿ ಎಂದು ಶುಭ ಹಾರೈಸುತ್ತಿದ್ದೇನೆ. ಜನರ ನೋವಿಗೆ , ಸಂಕಷ್ಟಕ್ಕೆ ಸ್ಪಂದಿಸುವ ನಾಯಕ ಎಂದೆಂದೂ ಜನರ ನಡುವಿನಲ್ಲೇ ಇರುವವರಾಗಿರುತ್ತಾರೆ ಇದಕ್ಕೆ ಹೇಮನಾಥ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಗಿದ್ದಾರೆ ಎಂದು ಹೇಳಿದರು.
ಹಿರಿಯ ಕಾರ್ಯಕರ್ತರಿಗೆ ಸನ್ಮಾನ
ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ 58 ಮಂದಿ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಶಾಲು, ಸ್ಮರಣಿಕೆ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕರ್ತರಾದ ನ್ಯಾಯವಾದಿ ಎಂ ಪಿ ಅಬೂಬಕ್ಕರ್, ಇಸ್ಮಾಯಿಲ್ ಸಾಲ್ಮರ, ಜಗನ್ನಾಥ ರೈ ಸೂತ್ರಬೆಟ್ಟು, ಇಬ್ರಾಹಿಂ ನೆಕ್ಕರೆ, ಕಿಟ್ಟಣ್ಣ ಗೌಡ ಬಪ್ಪಳಿಗೆ, ನೂಜಿಬೈಲು ಜಯಪ್ರಕಾಶ್ ರೈ, ಖಾದರ್ ಕೊಟ್ಯಾಡಿ, ಯೂಸುಫ್ ಹಾಜಿ ಕೊಟ್ಯಾಡಿ, ಸದಾನಂದ ಶೆಟ್ಟಿ ಕೂರೇಲು,ಪುರುಷೋತಮ್ಮ ರೈ ಬೂಡಿಯಾರು, ಸಾಬಾ ಕಬಕ, ಎಫ್ರೋಝಿನ್ ಲೊರೋನಾ ಬೆದ್ರಾಳ, ಐತಪ್ಪ ಪೇರಲ್ತಡ್ಕ, ಸಿಸಿಲಿಯಾ ಕುಟಿನಾ ರಾಗಿದಕುಮೇರ್, ನೀಲಮ್ಮ ಮಾಯಿಲಪ್ಪ ಪೂಜಾರಿ, ಕೊರಗಪ್ಪ ಗೌಡ ಬನ್ನೂರು, ಅಬ್ದುಲ್ ರಹಿಮಾನ್ ಆಝಾದ್, ಕೆ ಪಿ ಭಟ್ ಬೆಟ್ಟಂಪಾಡಿ, ಮುಂಢಪ್ಪ ಜಿಡೆಕಲ್ಲ್, ಅಬ್ದುಲ್ ಕುಂಞಿ ಗಾಳಿಮುಖ, ಇಬ್ರಾಹಿಂ ಮಾಡಾವು, ಕಮಲ ಮಾಡ್ನೂರು, ಅಂಬೋಡಿ ಅಮ್ಚಿನಡ್ಕ, ಉಮ್ಮರ್ ಯು ಎಸ್ ಸುಲ್ತಾನ್ ನಗರ, ಐತಪ್ಪ ಆಚಾರ್ ಸಾಮೆತ್ತಡ್ಕ, ಇಬ್ರಾಹಿಂ ಅಮ್ಮುಂಜ, ಕೆ ಎಸ್ ವೆಂಕಟ್ರಮಣ ಗೌಡ, ಚಂಧ್ರಾವತಿ ನೆಲ್ಲಿಕಟ್ಟೆ, ಮುತ್ತಪ್ಪ ಪೂಜಾರಿ, ಸಾಬಾ ಸಾಹೇಬ್ ಪಾಲ್ತಾಡ್, ದಾಸಪ್ಪ ರೈ ಬಪ್ಪಳಿಗೆ, ಹುಸೈನ್ ಬಪ್ಪಳಿಗೆ, ರಘು ಬಪ್ಪಳಿಗೆ, ಅಲ್ಬರ್ಟ್ ಡಿಸೋಜಾ, ಸುರೇಶ್ ಸಾಲಿಯಾನ್ ಸಾಮೆತ್ತಡ್ಕ, ಅಬ್ದುಲ್ ಖಾದರ್ ಸಾಲ್ಮರ, ಕೆ ಅಬ್ದುಲ್ಲಾ, ಅಬ್ದುಲ್ ರಹಿಮಾನ್ ಒಳತ್ತಡ್ಕ, ಪರಮೇಶ್ವರಿ ಭಂಡಾರಿ ,ಜೆರಾಂ ಪುಡ್ತಾದೋ ಕಜೆ, ನಾಗೇಶ್ ಆಚಾರ್ಯ ಸೇರಿದಂತೆ ಒಟ್ಟು ೫೮ ಮಂದಿ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಡಿಸಿಸಿ ಸದಸ್ಯರಾಗಿ ನೇಮಕಗೊಂಡ ಅನ್ವರ್ ಖಾಸಿಂ, ಅಶೋಕ್ಪೂಜಾರಿ ಸಂಪ್ಯ, ಲ್ಯಾನ್ಸಿ ಮಸ್ಕರೇನಸ್ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬೆ ಸ್ವಾಗತಿಸಿ, ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಅನ್ವರ್ ಖಾಸಿಂ, ಹನೀಫ್ ಪುಂಚತ್ತಾರ್, ಸಂಶುದ್ದೀನ್ ಅಜ್ಜಿನಡ್ಕ, ಇಸಾಕ್ ಸಾಲ್ಮರ, ದಿನೇಶ್ ಯಾದವ್ ಪಾಣಾಜೆ, ರವಿಪ್ರಸಾದ್ ಶೆಟ್ಟಿ ಬನ್ನೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ತುಳು ಮೇಳದ ವತಿಯಿಂದ ಕಾವು ಹೇಮನಾಥ ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳು ಹೂ ಹಾರ ಹಾಕಿ ಹುಟ್ಟು ಹಬ್ಬ ಆಚರಿಸುತ್ತಿರುವ ಹೇಮನಾಥ ಶೆಟ್ಟಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಅನಿತಾ ಹೇಮನಾಥ ಶೆಟ್ಟಿಯವರು ಹೇಮನಾಥ ಶೆಟ್ಟಿಯವರಿಗೆ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಯುಐ ಪುತ್ತೂರು ವಿಧಾಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಚಿರಾಗ್ ರೈ ಮೇಗಿನಗುತ್ತು, ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಬ್ಲಾಕ್ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.