ವಿದ್ಯಾಭ್ಯಾಸದ ಜೊತೆಯಲ್ಲಿ ಕೃಷಿಯಲ್ಲಿ ತೊಡಗಿಸಿ – ಸುಳ್ಯ ಕೃಷಿ‌ ಮೇಳದಲ್ಲಿ ಕಡಮಜಲು ಸುಭಾಸ್ ರೈ

0

ಪುತ್ತೂರು: ಸುಳ್ಯದಲ್ಲಿ ಬೃಹತ್ ಕೃಷಿ ಮೇಳ ಡಿಸೆಂಬರ್ 16 ರಿಂದ 18 ರ ತನಕ ಮೂರು ದಿನ ಜರಗಿತು. 17 ರಂದು ಜರಗಿದ ಆಧುನಿಕ ಕೃಷಿ ಮತ್ತು ಪರ್ಯಾಯ ಸಮಗ್ರ ಕೃಷಿ ಬಗ್ಗೆ ವಿಚಾರ ಸಂಕಿರಣದಲ್ಲಿ ಕೃಷಿತಜ್ಞ ಕಡಮಜಲು ಸುಭಾಸ್ ರೈ ಯವರು ಮಾತನಾಡಿ ‘ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿ ಬಾಲ್ಯಾವಸ್ಧೆಯಲ್ಲಿಯೇ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸ ಮುಗಿಸಿ ನೌಕರಿ ಹುಡುಕುವ ಬದಲು ಕೃಷಿಯನ್ನು ಉದ್ಯಮವಾಗಿ ಸ್ವೀಕರಿಸಿ ನನ್ನಂತೆ ಕೃಷಿಯಿಂದ ಸಂತೃಪ್ತ ಬದುಕನ್ನು ಬದುಕಬಹುದು. ಈಗೀಗ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಕೃಷಿಗೆ ಮುಖ ಮಾಡುವವರನ್ನು ಕಾಣಬಹುದು. ಅದರ ಬದಲು ಕೃಷಿಯನ್ನೇ ಮೂಲ ಕಸುಬಾಗಿ ಸ್ವೀಕರಿಸಿದರೆ ಉತ್ತಮ ಕೃಷಿ ಮಾಡಬಹುದಾಗಿದೆ. ರೈತ ವಿಜ್ಞಾನಿಯಾಗಿ ಕೃಷಿ ಮಾಡಬಹುದು’ ಎಂದು ಹೇಳಿದರು. ರೈತನ ಬೆವರಿಗೆ ಬೆಲೆ ಕಟ್ಟಲಾಗದು. ಬೆವರಿನ ಬೆಳೆಗೆ ಗೌರವವಿದೆ ಎಂದರು.


ರೈತ ವಿಜ್ಞಾನಿಯಾಗಬೇಕೆಂದು ಮಾತು ಮುಂದುವರಿಸಿದ ಸುಭಾಸ್ ರೈಯವರು ‘ರೈತರು ಪಂಚಸೂತ್ರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಬೇಕು. ಪಂಚ ಸೂತ್ರಗಳಲ್ಲಿ 1 ನೇ ಸೂತ್ರ ಪರಿಜ್ಞಾನ ಆಳವಾದ ಅಧ್ಯಯನ, 2 ನೇ ಸೂತ್ರ ಪರಿಶ್ರಮ ಕಠಿಣ ದುಡಿಮೆ, 3ನೇ ಸೂತ್ರ ಪರಿ ಪೂರ್ಣ ನಿರ್ವಹಣೆ- ಗಿಡ ನಡುವಳಿಂದ ಫಸಲು ಪಡೆಯುವ ತನಕ ಕೃಷಿ ತೋಟದ ಕ್ಷೇತ್ರ ಸಂಪೂರ್ಣ ನಿರ್ವಹಣೆ, 4ನೇ ಸೂತ್ರ ಪತ್ನಿಯನ್ನು ಕೃಷಿಕ್ಷೇತ್ರದಲ್ಲಿ ಜೊತೆಜೊತೆಯಾಗಿ ತೊಡಗಿಸಿಕೊಳ್ಳುವುದು. 5 ನೇ ಪಂಚ ಸೂತ್ರ ಫಲಿತಾಂಶ ಇದರ ಬಗ್ಗೆ ನೀರಿಕ್ಷೆ ಇರಬೇಕು. ಅತಿಯಾದ ನಿರೀಕ್ಷೆಯು ಬೇಕು. ಆದರೆ ಫಲಿತಾಂಶದಲ್ಲಿ ವ್ಯತ್ಯಾಸವಾದರೆ ಸುಧಾರಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಂಡು ಸಂತೋಷವಾಗಿರಬೇಕು. ಕೃಷಿಕ ಖುಷಿಯಿಂದ ಇರಬೇಕು. ಸಮೃದ್ಧ ಬದುಕು ಕೃಷಿದಾಗಲಿ ಎಂದು ಶುಭ ಹಾರೈಸಿದರು.
ಸಭಾಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾವಿನಯ ಚಂದ್ರ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಭಾಕರ ಮಯ್ಯ ಗೌರವ ಉಪಸ್ಧಿತಿಯಲ್ಲಿ ವೇದಾವತಿ ಅನಂತ ಬಡ್ಕಪ್ಪ ಉಪಸ್ದಿತರಿದ್ದರು.

ದ. 23 ರೈತ ದಿನಾಚರಣೆ. ರೈತ ದಿನಾಚರಣೆ ಕೇವಲ ಆಚರಣೆ ಸೀಮಿತವಾಗದೆ ನಿಜ ಜೀವನದ ಬದುಕಿನ ಆಚರಣೆಯಾಗಲಿ ಎಂದ ರೈಯವರು ಸುದ್ದಿ ಬಿಡುಗಡೆ ಸಂಪಾದಕ ಡಾ. ಶಿವಾನಂದರ ಕೃಷಿ ಬದುಕಿನ ಆಶಯ ರೈತ ದಿನಾಚರಣೆ ಮೂಲಕ ನೆರವೇರಲಿ ರೈತ ದೇಶದ ಬೆನ್ನೆಲುಬು, ರೈತ ದೇವೊಭವ ರೈತ ಸುಖೀಭವ’ ಎಂದರು.

LEAVE A REPLY

Please enter your comment!
Please enter your name here