ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ನೆರೆಯ ದೇವಸ್ಥಾನಗಳಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಡಿ.21ರಂದು ನೀಡಲಾಯಿತು.
ಮೊದಲಿಗೆ ನಮ್ಮ ಗ್ರಾಮ ದೇವರಾದ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾಗ್ದೋಷ ಪರಿಹಾರಕ್ಕಾಗಿ ಶ್ರೀದೇವರಿಗೆ ಬೆಳ್ಳಿಯ ನಾಲಿಗೆ, ಉತ್ತಮ ತೂಗುಮನಿ ಹಾಗೂ ಭದ್ರ ದೀಪಗಳನ್ನು ಕಾಣಿಕೆ ಸಹಿತ ಸಮರ್ಪಿಸಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಆಲಡ್ಕ ಸದಾಶಿವ ದೇವಸ್ಥಾನ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಕೆಮ್ಮಿಂಜೆ ಮಹಾವಿಷ್ಣು ಸುಬ್ರಹ್ಮಣ್ಯ ದೇವಸ್ಥಾನ, ಪಾಲಿಂಜೆ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಹಾಗೂ ಸೀಮೆ ದೇವರಾದ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫಲ ಪುಷ್ಪ ಕಾಣಿಕೆ ಸೇವೆ ಸಲ್ಲಿಸಿ ಪ್ರಾರ್ಥನೆ ಮಾಡಿ ವಾರ್ಷಿಕವಾಗಿ ಸೇವೆ ಹಾಗೂ ಕಾಣಿಕೆ ಸಲ್ಲಿಸುವ ಕುರಿತು ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಧು ನರಿಯೂರು, ಸದಸ್ಯರಾದ ಅರ್ಚಕರು ಪ್ರಕಾಶ್ ರಾವ್, ಜೈ ರಾಜ್ ಭಂಡಾರಿ, ಧನರಾಜ್ ಆಲಕ್ಕಿ, ಜಯಶೀಲರೈ, ಹಿರಿಯರಾದ ಚಂದ್ರಹಾಸ ರೈ ತುಂಬೇದ ಕೋಡಿ, ವಿಷ್ಣು ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶಿವರಾಮ ಆಳ್ವ ಹಾಗೂ ಅರವಿಂದ ಭಗವಾನ್ ದಾಸ್ ರೈ, ಗೋಪಾಲ ಗೌಡ, ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ ಗೌಡ ಹಾಗೂ ಉಳಿದ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಭಕ್ತರು ಹಾಜರಿದ್ದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.