ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್‌ನಲ್ಲಿ ಕ್ರಿಸ್ಮಸ್, ಹೊಸ ವರ್ಷದ ಆಫರ್

0

ಯಾವುದೇ ಕಂಪೆನಿಯ ಐಟಂಗಳನ್ನು ಪ್ರೆಸ್ಟೀಜ್‌ಗೆ ಬದಲಾಯಿಸಿಕೊಳ್ಳಿ..

ಪುತ್ತೂರು: ಅಲ್ಯೂಮಿನಿಯಂ ಇಂಡಸ್ಟ್ರೀಸ್‌ನಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಇಲ್ಲಿನ ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರದ ಬಳಿ ವ್ಯವಹರಿಸುತ್ತಿರುವ ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಯಾವುದೇ ಕಂಪೆನಿಯ ಐಟಂಗಳನ್ನು ಪ್ರೆಸ್ಟೀಜ್ ಕಂಪೆನಿಯ ಐಟಂಗಳಿಗೆ ಬದಲಾಯಿಸಿಕೊಳ್ಳುವ ಮೆಗಾ ಎಕ್ಸ್‌ಚೇಂಜ್ ಆಫರ್ ಹಾಗೂ ಫ್ರೀ ಸರ್ವಿಸ್ ಕ್ಯಾಂಪ್ ಲಭ್ಯವಿದೆ.

ಯಾವುದೇ ಕಂಪೆನಿಯ ಅಲ್ಯೂಮಿನಿಯಂ ಕುಕ್ಕರ್, ನಾನ್‌ಸ್ಟಿಕ್ ಕುಕ್ವೇರ್, ಗ್ಯಾಸ್ ಸ್ಟೌವ್, ಮಿಕ್ಸರ್ ಗ್ರೈಂಡರ್ ಅನ್ನು ಹೊಚ್ಚ ಹೊಸ ಪ್ರೆಸ್ಟೀಜ್ ಉತ್ಪನ್ನಗಳೊಂದಿಗೆ ಬದಲಾಯಿಸಿಕೊಳ್ಳುವ ಸುವರ್ಣಾವಕಾಶವನ್ನು ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀ ಸಂಸ್ಥೆಯವರು ಗ್ರಾಹಕರಿಗೆ ಪರಿಚಯಿಸುತ್ತಿದ್ದಾರೆ. ಜೊತೆಗೆ ಗ್ರಾಹಕರಲ್ಲಿನ ಹಳೆಯ ಪ್ರೆಸ್ಟೀಜನ್ನು ಹೊಸದಾಗಿಸಿಕೊಳ್ಳುವ ಅವಕಾಶವೂ ಲಭ್ಯವಿದೆ. ಈ ಕೊಡುಗೆ ಡಿಸೆಂಬರ್ 22 ರಿಂದ 24ರ ವರೆಗೆ ಲಭ್ಯವಿದ್ದು ಗ್ರಾಹಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here