ಪುತ್ತೂರು: ತಿಂಗಳಾಡಿ ಮಠ ನಿವಾಸಿ ಚರಣ್ ರೈ ಅವರು 25 ನೇ ಬಾರಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. 25 ವರ್ಷ ಪ್ರಾಯದ ಚರಣ್ ರೈ ಅವರು ತನ್ನ 18 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪ್ರಥಮವಾಗಿ ರಕ್ತದಾನ ಮಾಡಿದ್ದು ಆ ಬಳಿಕ ಕಾಲೇಜಿನಲ್ಲಿ ಕಲಿಯುತ್ತಿರುವ ಸಂದರ್ಭದಲ್ಲೂ ರಕ್ತದಾನ ಮಾಡುತ್ತಾ ಬಂದಿದ್ದಾರೆ. 8 ಬಾರಿ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿರುವ ಇವರು ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿದ್ದಾರೆ.
ವಿಶ್ವ ರಕ್ತದಾನಿಗಳ ದಿನದಂದು ಇಂಡಿಯನ್ ರೆಡ್‌ಕ್ರಾಸ್ ದ.ಕ ವತಿಯಿಂದ ಇವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.
ಆನಂದ ರೈ ಮಠ ಹಾಗೂ ಚಂದ್ರಕಲಾರವರ ಪುತ್ರನಾಗಿರುವ ಚರಣ್ ರೈ ಅವರು ಪ್ರಸ್ತುತ ಪುತ್ತೂರು ದರ್ಬೆ ಉಷಾ ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ.