ಬೆಟ್ಟಂಪಾಡಿ: ರೆಂಜ ಶ್ರೀರಾಮನಗರ ಅಯ್ಯಪ್ಪ ಸ್ವಾಮಿ ಭಜನಾ ಸಂಘದ 25 ನೇ ವರ್ಷ ವಾರ್ಷಿಕೋತ್ಸವ ಬೆಳ್ಳಿಹಬ್ಬ ಸಂಭ್ರಮ, ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ದ. 22 ರಂದು ಮಧ್ಯಾಹ್ನ ನಡೆಯಿತು.
ಬೆಳಿಗ್ಗೆ ಮಂಜುಳಗಿರಿ ವೆಂಕಟರಮಣ ಭಟ್ಟರ ನೇತೃತ್ವದಲ್ಲಿ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಪ್ರಗತಿಪರ ಕೃಷಿಕ ನಾಕೂರು ರಘುನಾಥ ರೈ ಕೂವೆಂಜ ಉದ್ಘಾಟಿಸಿದರು. ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕತ್ತಲೆಕಾನ ಶುಭ ಹಾರೈಸಿದರು.
ಮಾಳಿಕಾಪುರಂ ಮೇಲ್‌ಶಾಂತಿ ಶಬರಿಮಲ ಬ್ರಹ್ಮಶ್ರೀ ಕೆ. ಶಂಭು ನಂಬೂದಿರಿ ಹಾಗೂ ಗುರುಪುರ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಮೇಲ್‌ಶಾಂತಿ ಬ್ರಹ್ಮಶ್ರೀ ಕೆ. ಶಂಭು ನಂಬೂದಿರಿ ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪಾಂಜಲಿ ಪೂಜೆ ಸಲ್ಲಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕೆ. ಶಂಭು ನಂಬೂದಿರಿ ಹಾಗೂ ವಜ್ರದೇಹಿ ಶ್ರೀಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ನಳೀಲು, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ ರೆಂಜ, ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀವತ್ಸ ಕಾಜಿಮೂಲೆ ಭಾಗವಹಿಸಿ ಶುಭ ಹಾರೈಸಿದರು.
ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಶಂಕರನಾರಾಯಣ ರಾವ್ ಪಾರ ಸಭಾಧ್ಯಕ್ಷತೆ ವಹಿಸಿದ್ದರು.
ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.
ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ ಮತ್ತು ದೀಪಿಕಾ ರೈ ದಂಪತಿ ಬ್ರಹ್ಮಶ್ರೀ ಕೆ. ಶಂಭು ನಂಬೂದಿರಿಯವರನ್ನು ಫಲಫುಷ್ಪ ನೀಡಿ ಗೌರವಿಸಿದರು.
ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಬಾಬು ಗೌಡ ಪಾರ ದಂಪತಿ ವಜ್ರದೇಹಿ ಶ್ರೀಗಳಿಗೆ ಫಲಫುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಅಯ್ಯಪ್ಪ ಭಜನಾ ಮಂದಿರದ ಕಾರ್ಯದರ್ಶಿ ರವಿನಾಥ ಕೋನಡ್ಕ ಹಾಗೂ ಬೆಳ್ಳಿಹಬ್ಬ ಸಮಿತಿ ಕಾರ್ಯದರ್ಶಿ ರಾಜೇಶ್ ನೆಲ್ಲಿತ್ತಡ್ಕ ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ವಂದಿಸಿದರು. ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಮಣಿಕಂಠ ಚೆಂಡೆಮೇಳದವರಿಂದ ಚೆಂಡೆ ವಾದನ ನಡೆಯುತು. ಶ್ರೀ ಅಯ್ಯಪ್ಪ ವೃತ ಮಾಲಾಧಾರಿಗಳು, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು, ಮರಾಠಿ ವಲಯ ಸದಸ್ಯರು, ಕಾರ್ಯಕರ್ತರು, ಅಯ್ಯಪ್ಪ ಭಕ್ತವೃಂದ ಸಹಕರಿಸಿದರು. ಮಧ್ಯಾಹ್ನ ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಾವಿರಕ್ಕೂ ಮಿಕ್ಕಿ ಭಕ್ತರು ಅಯ್ಯಪ್ಪ ಅನ್ನಪ್ರಸಾದ ಸ್ವೀಕರಿಸಿದರು.