ಡಿ. 24-26 ಕಂರ್ದ್ಲಾಜೆ ಕುಟುಂಬದ ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠೆ, ನೇಮೋತ್ಸವ

0

ಕಾಣಿಯೂರು: ಚಾರ್ವಾಕ ಗ್ರಾಮದ ಕಂರ್ದ್ಲಾಜೆ ಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಕುಟುಂಬದ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವವು ಡಿ. 24ರಿಂದ ಡಿ. 26ರವರೆಗೆ ನಡೆಯಲಿದೆ. ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿ.24ರಂದು ಸಂಜೆ ತಂತ್ರಿಗಳ ಆಗಮನ, ಸ್ಥಳ ಶುದ್ಧಿ ಮತ್ತು ವಾಸ್ತು ಹೋಮ ನಡೆಯಲಿದ್ದು, ಡಿ. 25ರಂದು ಬೆಳಿಗ್ಗೆ ಗಣಹೋಮ, ದೈವಗಳ ಪ್ರತಿಷ್ಠೆ ಮತ್ತು ತಂಬಿಲ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ರುದ್ರಾಚಾಮುಂಡಿ ಪರಿವಾರ ದೈವಗಳ ಕಿರುವಾಲು ಭಂಡಾರ ತೆಗೆದು ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಡಿ.26ರಂದು ಬೆಳಿಗ್ಗೆ ಧರ್ಮದೈವ, ರುದ್ರಾಚಾಮುಂಡಿ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪದ್ಮಯ್ಯ ಗೌಡ ಕಂರ್ದ್ಲಾಜೆ, ಡಾ.ಧರ್ಮಪಾಲ ಗೌಡ ಕಂರ್ದ್ಲಾಜೆ, ಬಾಬು ಗೌಡ ಕಜೆ ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here