ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ನಗರ ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ ಮಂಗಳೂರು ಘಟಕದ ವತಿಯಿಂದ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ನಾಟಕ ವಿಭಾಗದಲ್ಲಿ ಸಂಜಯನಗರ ಶಾಲಾ ಶಿಕ್ಷಕ ರಮೇಶ್ ಉಳಯ ಇವರು ರಚಿಸಿ ನಿರ್ದೇಶಿಸಿರುವ ನಾಟಕ ’ಕಾಡಬೆಂಕಿ’ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ರಾಜ ಯಯಾತಿಯ ಮಗಳು ಮಾಧವಿಯ ದುರಂತ ಕಥೆ ನಾಟಕದ ಕಥಾವಸ್ತು. ರಾಜ ಯಯಾತಿ ತನ್ನ ಮಗಳಾದ ಮಾಧವಿಯನ್ನು ವಿಶ್ವಾಮಿತ್ರರ ಶಿಷ್ಯನಾದ ಗಾಲವನಿಗೆ ದಾನ ಮಾಡುತ್ತಾನೆ. ಗಾಲವ ವಿಶ್ವಾಮಿತ್ರರಿಗೆ ನೀಡಬೇಕಾಗಿದ್ದ 800 ಶ್ವೇತಾಶ್ವಗಳ ಗುರುದಕ್ಷಿಣೆಗೋಸ್ಕರ ಮಾಧವಿಯನ್ನು ಬೇರೆ ಬೇರೆ ರಾಜರಿಗೆ ಕೊಟ್ಟು ಕುದುರೆ ವ್ಯಾಪಾರ ಮಾಡುತ್ತಾನೆ. ಹೆಣ್ಣನ್ನು ಬರಿ ಭೋಗದ ವಸ್ತುವಾಗಿ ನಡೆಸಿಕೊಳ್ಳುವ ಗಂಡು ಸಮಾಜದ ಬಗ್ಗೆ ವ್ಯಗ್ರಗೊಳ್ಳುವ ಮಾಧವಿ ತನಗೆ ಮದುವೆ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾಳೆ ಅಂತಿಮವಾಗಿ ಏಕಾಂಗಿಯಾಗುತ್ತಾಳೆ. ಇದು ನಾಟಕದ ಕಥಾವಸ್ತು ನಾಟಕದಲ್ಲಿ ಮಂಗಳೂರು ತಾಲೂಕು ಕಾಟಿಪಳ್ಳ ಶಾಲಾ ಪದವೀಧರ ಶಿಕ್ಷಕಿ ಇಂದಿರಾ ಮಾಧವಿ, ಮಾಧವಿಯ ತಾಯಿ, ಬೇಟೆಗಾರರ ನಾಯಕಿ ಪುತ್ತೂರು ತಾಲೂಕು ಗೋಳಿ ತೊಟ್ಟು ಶಾಲಾ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಮಾಧವಿ, ಬೇಟೆಗಾರರು ಬಂಟ್ವಾಳ ತಾಲೂಕು ಕನ್ಯಾನ ಶಾಲಾ ಪದವೀಧರ ಶಿಕ್ಷಕಿ ನಯನಗೌರಿ ಮಾಧವಿ, ಬೇಟೆಗಾರರು ಕುದ್ದುಪದವು ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ ಬಳ್ಳಾಲ್ ಸಖಿಯರು ಹಾಗೂ ಬೇಟೆಗಾರರು ಪುತ್ತೂರು ತಾಲೂಕು ಬಡಗನ್ನೂರು ಶಾಲಾ ಶಿಕ್ಷಕ ಜನಾರ್ದನ್ ದುರ್ಗಾ ಯಯಾತಿ ಹಾಗೂ ದೀವೋದಾಸ ಬಂಟ್ವಾಳ ತಾಲೂಕು ಪಡಿಬಾಗಿಲು ಶಾಲಾ ಶಿಕ್ಷಕ ಮುತ್ತುರಾಜ ಹರಿಯಾಸ್ವ ಮತ್ತು ಉಶೀನರ ಮೂಡಬಿದ್ರೆ ತಾಲೂಕು ಮೂಡಬಿದ್ರೆಯ ಶಿಕ್ಷಕ ಪ್ರಶಾಂತ ಆಚಾರ್ಯ ಹರಿಯಾಸ್ವ ಮತ್ತು ಗಾಲವನ ಪಾತ್ರಗಳಲ್ಲಿ ನಾಟಕಕ್ಕೆ ಜೀವ ತುಂಬಿದ್ದಾರೆ.
ಬಂಟ್ವಾಳ ತಾಲೂಕು ನೀರ್ಕಜಿ ಶಾಲಾ ಶಿಕ್ಷಕ ರಾಮ ನಾಯ್ಕ ಇವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದೆ.