ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆ – 3X60 ಫ್ಯಾಮಿಲಿ ರೆಸ್ಟೋರೆಂಟ್, ಬಾರ್ ಶುಭಾರಂಭ

0

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ವ್ಯವಹರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮತ್ತೊಂದು ಹೊಸ ವರ್ಷದ ಕೊಡುಗೆಯಾಗಿ 3X60 ಫ್ಯಾಮಿಲಿ ರೆಸ್ಟೋರೆಂಟ್ ಬಾರ್ ದ.22 ರಂದು ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಪವಿತ್ರ ಜಲ ಸಂಪ್ರೋಕ್ಷಿಸಿ ಉದ್ಯಮವು ಯಶಸ್ವಿಯಾಗಲೆಂದು ಆಶೀರ್ವಚನಗೈದರು.

ನೂತನ ಬಾರ್ ಆಂಡ್ ರೆಸ್ಟೋರೆಂಟ್ ನ ಮಾಲಕ ಮನೋಜ್ ಡಾಯಸ್ ರವರ ತಂದೆ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್, ತಾಯಿ ಲೆತ್ತೀಶಿಯ ಮಸ್ಕರೇನ್ಹಸ್, ಅತ್ತೆ ಲೂಸಿ ಮಸ್ಕರೇನ್ಹಸ್ ರವರು ಜೊತೆಗೂಡಿ ರಿಬ್ಬನ್ ಕತ್ತರಿಸಿ ಚಾಲನೆಗೈದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ನಿಯೋಜಿತ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನಕುಮಾರ್ ಶೆಟ್ಟಿ, ಎಸಿಎಫ್ ಪ್ರವೀಣ್ ಶೆಟ್ಟಿ, ಪರ್ಪುಂಜ ಚಾವಡಿ ಬಾರ್ ಆಂಡ್ ರೆಸ್ಟೋರೆಂಟಿನ ನಿಹಾಲ್ ಶೆಟ್ಟಿ, ವಿನೋದ್ ವೈನ್ಸ್ ನ ವಿನೋದ್, ಸುಜಾತಾ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ನ ಸುಶಾಮ್ ಶೆಟ್ಟಿ, ಉಜಿರೆ ಹಳ್ಳಿಮನೆಯ ಪ್ರವೀಣ್, ನಗರಸಭಾ ಸದಸ್ಯ ಬಾಲಚಂದ್ರ ಕೆ, ಸಂತೋಷ್ ವೈನ್ಸ್ ನ ನವೀನ್, ಫಿಲೋಮಿನಾ ಕಾಲೇಜು ಕ್ಯಾಂಟೀನಿನ ಆನಂದ ಶೆಟ್ಟಿ, ಜೆರೋಮ್ ಫುಡ್ತಾದೋ ಕಜೆ ಸಾಮೆತ್ತಡ್ಕ, ಕ್ಲಾಸಿ ಕ್ಲಿಕ್ಸ್ ಸ್ಟುಡಿಯೋ ಮಾಲಕ ರೋಶನ್ ಡಾಯಸ್, ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಸ್ಥೆಯ ಮಾಲಕ ಮನೋಜ್ ಡಾಯಸ್ ಹಾಗೂ ನಿಶಾ ಡಾಯಸ್ ರವರು ಸ್ವಾಗತಿಸಿದರು. ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರಿನ ತರಬೇತುದಾರರಾದ ನವನೀತ್ ಬಜಾಜ್,ಆದರ್ಶ್ ಬಿರ್ವ ಸಹಿತ ಕ್ರಿಸ್ಟೋ-ರ್ ಸಮೂಹ ಸಂಸ್ಥೆಗಳ ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here