ಸವಣೂರು :ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವು ನ.24ರಂದು ನಡೆಯಲಿದೆ.
ಬೆಳಿಗ್ಗೆ 9ಕ್ಕೆ ಪಾಲ್ತಾಡಿ ಸರಕಾರಿ ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ ಅವರು ಧ್ವಜಾರೋಹಣ ನೆರವೇರಿಸುವರು.
ಬೆಳಿಗ್ಗೆ 10 ರಿಂದ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ವಹಿಸುವರು.
ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಸತೀಶ್ ಅಂಗಡಿಮೂಲೆ, ಭರತ್ ರೈ ಅಲ್ಯಾಡಿ, ತಾರಾನಾಥ ಬೊಳಿಯಾಲ, ಹರೀಶ್ ಕಾಯರಗುರಿ, ಚೇತನಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರಗೌಡ, ಸಮನ್ವಯಾಧಿಕಾರಿ ನವೀನ್ ವೇಗಸ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಶಿಕ್ಷಣ ಸಂಯೋಜಕಿ ಅಮೃತಕಲಾ, ಕೆಯ್ಯೂರು ಸಿ.ಆರ್.ಪಿ. ನಿರಂಜನ್, ಕೊಳ್ತಿಗೆ ಪ್ರಾ.ಕೃ.ಸ. ಸಂಘದ ನಿರ್ದೇಶಕ ಶ್ರೀಧರ ಗೌಡ ಅಂಗಡಿ ಹಿತ್ಲು, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗುರುಕಿರಣ್ ಬೊಳಿಯಾಲ,ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಅಧ್ಯಕ್ಷ ಉದಯಗೌಡ, ನವೋದಯ ಒಕ್ಕೂಟದ ಅಧ್ಯಕ್ಷ ಮೋಹಿನಿ ಪಾಲ್ತಾಡು ಪಾಲ್ಗೊಳ್ಳುವರು.
ಈ ಸಂಧರ್ಭದಲ್ಲಿ ಸುಮಾ ಆನಂದ ಗೌಡ ಮತ್ತು ಮಕ್ಕಳು ಪಾರ್ಲ ಅವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯಾಗಲಿದೆ.
ರಾತ್ರಿ 7 ರಿಂದ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಚಿವ ಎಸ್.ಅಂಗಾರ ವಹಿಸುವರು.ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಪ್ರಜ್ವಲನೆ ಮಾಡುವರು. ಅತಿಥಿಗಳಾಗಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ,ಪ್ರಮುಖ ಭಾಷಣಗಾರರಾಗಿ ಚಿಂತಕ ಅರವಿಂದ ಚೊಕ್ಕಾಡಿ ಪಾಲ್ಗೊಳ್ಳುವರು.
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ನಿವೃತ ಮುಖ್ಯ ಗುರು ಈಶ್ವರ ಭಟ್ ಎಲ್ಯಡ್ಕ ,ನಿವೃತ ಸೇನಾಧಿಕಾರಿ ಸಂಜೀವ ಗೌಡ ಪಾರ್ಲ ಗೌರವ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಭಟ್ ,ನಿವೃತ ಅಂಗನವಾಡಿ ಕಾರ್ಯಕರ್ತೆ ಸುನಂದ ಅವರಿಗೆ ಸನ್ಮಾನ ಹಾಗೂ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಮತ್ತು ಎಸ್.ಡಿ.ಎಂಸಿ ಅಧ್ಯಕ್ಷರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಪಾರ್ಲ, ಮುಖ್ಯ ಶಿಕ್ಷಕಿ ಸುಜಾತಾ ರೈ ಪಿ.ಜಿ ,ಶಾಲಾ ನಾಯಕ ವೀಕ್ಷಣ್ ತಿಳಿಸಿದ್ದಾರೆ.
ಸಾಂಸ್ಕೃತಿಕ ಸಂಭ್ರಮ
ಸಂಜೆ 3ರಿಂದ ನಡೆಯುವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ತಾಡಿ ,ಉಪ್ಪೊಳಿಗೆ ಅಂಗನವಾಡಿ ಕೇಂದ್ರ, ಪಾಲ್ತಾಡಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ ನಡೆಯಲಿದೆ. ಸಂಜೆ 5.30 ರಿಂದ ಯಕ್ಷ ಸಂಭ್ರಮದಲ್ಲಿ ಸುಬ್ಬು ಸಂಟ್ಯಾರ್ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸುದರ್ಶನೋಪಖ್ಯಾನ ಯಕ್ಷಗಾನ ನಡೆಯಲಿದೆ. ರಾತ್ರಿ 10 ರಿಂದ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ತಂಡದಿಂದ ದೀಪಕ್ ರೈ ಪಾಣಾಜೆ ತಂಡದಿಂದ ಹಾಸ್ಯ ನಾಟಕ ನಿತ್ಯೆ ಬನ್ನಗ ಪ್ರದರ್ಶನ ನಡೆಯಲಿದೆ.