ನೆಲ್ಯಾಡಿ: ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ದನವೊಂದನ್ನು ಕಡಿದು ಮಾಂಸ ಮಾರಾಟ ಮಾಡಿ ಅದರ ತಲೆ, ಕಾಲುಗಳನ್ನು ಸ್ಥಳದಲ್ಲೇ ಬಿಟ್ಟುಹೋಗಿದ್ದ ಆರೋಪಿ ಶಿರಾಡಿ ಗ್ರಾಮದ ಅಡ್ಡಹೊಳೆ ಮಿತ್ತಮಜಲು ನಿವಾಸಿ ತೋಮಸ್ ಯಾನೆ ಮನೋಜ್ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಡಿ.23ರಂದು ಬಂಧಿಸಿದ್ದಾರೆ.
ಸಿರಿಬಾಗಿಲು ಗ್ರಾಮದ ದೇರಣೆ ಅರಣ್ಯ ಪ್ರದೇಶದಲ್ಲಿ ದನವೊಂದನ್ನು ಕಡಿದು ಮಾಂಸ ಮಾರಾಟ ಮಾಡಿ ಅದರ ತಲೆ, ಕಾಲುಗಳನ್ನು ಅಲ್ಲೇ ಬಿಟ್ಟುಹೋಗಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ಕೈಗೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಶಿರಾಡಿ ಗ್ರಾಮದ ಅಡ್ಡಹೊಳೆ ನಿವಾಸಿ ತೋಮಸ್ ಯಾನೆ ಮನೋಜ್ ಎಂಬಾತನನ್ನು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಸಬ್‌ಇನ್ಸ್‌ಪೆಕ್ಟರ್ ರಾಜೇಶ್, ನೆಲ್ಯಾಡಿ ಹೊರಠಾಣೆ ಹೆಡ್ ಕಾನ್ಸ್‌ಸ್ಟೇಬಲ್‌ಗಳಾದ ಬಾಲಕೃಷ್ಣ, ಕುಶಾಲಪ್ಪ, ಪ್ರತಾಪ್‌ರವರು ಪಾಲ್ಗೊಂಡಿದ್ದರು. ಈ ಪ್ರಕರಣದಲ್ಲಿನ ಇತರೇ ಆರೋಪಿಗಳ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿ ತೋಮಸ್ ಯಾನೆ ಮನೋಜ್ ರಬ್ಬರ್ ಕಳ್ಳತನ ಹಾಗೂ ಇತರೇ ಹಲವು ಪ್ರಕರಣದ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.