ಉಪ್ಪಿನಂಗಡಿ: ಕಳೆದ ನಾಲ್ಕೈದು ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಭಿನ್ನ ಶೈಲಿಯ ನಾಟಕಗಳನ್ನು ನೀಡಿ ಜನರ ಪ್ರೀತಿಗೆ ಪಾತ್ರರಾದ “ಗಯಾಪದ ಕಲಾವಿದರ್ ಉಬಾರ್”ತಂಡದ ಈ ವರ್ಷದ ನೂತನ ಕಲಾ ಕಾಣಿಕೆ ರವಿಶಂಕರ ಶಾಸ್ತ್ರಿ ಮಣಿಲ ಪುಣಚ ,ರಚಿಸಿ, ನಿರ್ದೇಶಿಸಿರುವ ಹಾಸ್ಯ ನಾಟಕ ‘ನಮ ತೆರಿಯೊನುಗ- ಇನಿ ಅತ್ತಂಡ ನನ ಏಪ’ ಇದರ ರಂಗಾರ್ಪಣೆಯು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ “ರಾಮ ಜಾನಕಿ” ವೇದಿಕೆಯಲ್ಲಿ ನಡೆಯಿತು.
ಬಾಲಕೃಷ್ಣ ಪೂಜಾರಿ ಪೆರುವಾಯಿ ನಿರಾಲ ಇವರ ಸಾರಥ್ಯದ ಗಯಾಪದ ಕಲಾವಿದರ್ ಉಬಾರ್ ತಂಡದ ಪ್ರಬುದ್ಧ ರಂಗಕಲಾವಿದರಿಂದ ಪ್ರಥಮ ಪ್ರರ್ದಶನಗೊಂಡ “ನಮ ತೆರಿಯೊನುಗ” ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡು ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿ ತುಳು ರಂಗಭೂಮಿಯಲ್ಲಿ ವಿನೂತನ ಶೈಲಿಯ ರಂಗವಿನ್ಯಾಸ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.