ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮದ ಸಮಾರೋಪ

0

ಸಮಾಜದಲ್ಲಿ ಬಾಂಧವ್ಯ ಬೆಳೆಸಲು ಕ್ರೀಡೆ ಪರಿಣಾಮಕಾರಿ – ಚಿದಾನಂದ ಬೈಲಾಡಿ

ಪುತ್ತೂರು: ಸಮಾಜದಲ್ಲಿ ಬಾಂಧವ್ಯ ಬೆಳೆಸುಲು ಕ್ರೀಡೆ ಪರಿಣಾಮಕಾರಿ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಯುವ ಗೌಡ ಸಂಘದ ನೇತೃತ್ವದಲ್ಲಿ ಕ್ರೀಡಾ ಸಂಭ್ರಮ ಎಲ್ಲಾ ವಲಯಗಳಲ್ಲೂ ಯಶಸ್ವಿಯಾಗಿ ನಡೆದಿದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆತಿಥ್ಯದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಡಿ.25ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ನಂದಿಲ, ಒಕ್ಕಲಿಗ ಗೌಡ ಸಂಘದ ಪುತ್ತೂರು ನಗರ ಸಮಿತಿ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಕಡಬ ತಾಲೂಕಿನ ನೂತನ ಅಧ್ಯಕ್ಷ ಸುರೇಶ್ ಬೈಲು, ನಿವೃತ್ತ ಆರೋಗ್ಯ ಸಹಾಯಕಿ ಪುಷ್ಪಾವತಿ, ಕ್ರೀಡಾ ಸಂಚಾಲಕ ಎ.ವಿ.ನಾರಾಯಣ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕಡೆಂಜಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ಪಾಲ್ತಾಡಿ, ಯುವ ಒಕ್ಕಲಿಗ ನಗರ ವಲಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಕ್ರೀಡಾಂಗಣ ಸಮಿತಿ ಮೋಹನ್ ಗೌಡ ಕಬಕ, ಲಿಖಿತ್ ಕುಂದ್ರುಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ತೀರ್ಪುಗಾರರಾಗಿ ಸಹಕರಿಸಿದವರನ್ನು ಗೌರವಿಸಲಾಯಿತು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಮಿತಿ ಉಪ ಸಂಚಾಲಕ ಯುವರಾಜ್ ಪೆರಿಯತ್ತೋಡಿ, ಪುತ್ತೂರು ವಲಯ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ವಸಂತ ಕಬಕ, ಕಿಶೋರ್ ಮೆರಿಕೆ, ದಿನೇಶ್ ಗೋಮುಖ, ಸೀತಾರಾಮ ಪೆರಿಯತ್ತೋಡಿ, ಗೋವರ್ಧನ ಗೌಡ ಕಲ್ಲೇಗ, ಶರತ್ ಗೌಡ, ಪ್ರಕಾಶ್ ಕೆಮ್ಮಾಯಿ, ನಮಿತಾ, ದಿನೇಶ್ ಕುಂದ್ರುಕೋಟೆ, ಪ್ರಶಾಂತ್ ಸಹಿತ ಹಲವಾರು ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಬಹುಮಾನಗಳ ವಿವರ:

ಯುವ ಕ್ರೀಡಾ ಸಂಭ್ರಮದಲ್ಲಿ ಒಟ್ಟು 7 ವಲಯಗಳಲ್ಲಿ ನಡೆದ ವಲಯ ಮಟ್ಟದ ಸ್ಪರ್ಧೆಗಳಲ್ಲಿ 250 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಪುರುಷರಿಗೆ ಮ್ಯಾಟ್ ಅಂಕಣದ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಕ್ರಿಕೆಟ್, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, 4*100 ಮೀಟರ್ ರಿಲೇ, ಕಬಡ್ಡಿ, ಪ್ರೌಢ ಶಾಲಾ ವಿಭಾಗದಲ್ಲಿ ಬಾಲಕರಿಗೆ ಕಬಡ್ಡಿ, 100ಮೀ ಮತ್ತು 400ಮೀಟರ್ ಓಟ, ಬಾಲಕಿಯರಿಗೆ 100ಮೀಟರ್ ಮತ್ತು 400ಮೀಟರ್ ಓಟ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ 4*100ಮೀಟರ್ ರಿಲೇ, 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಗಂಡೆಸೆತ ಮತ್ತು 100ಮೀಟರ್ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಒಟ್ಟು ಸ್ಪರ್ಧೆಗಳಲ್ಲಿ ಪುತ್ತೂರು ವಲಯ 83 ಅಂಕ ಪಡೆದು ವಲಯ ಸಮಗ್ರ ಪ್ರಶಸ್ತಿ ಪಡೆದು ಕೊಂಡಿತ್ತು. ಕಡಬ ವಲಯ 47ಅಂಕ ಪಡೆದು ದ್ವಿತೀಯ ಸ್ಥಾನ ಪಡೆದು ಕೊಂಡಿತ್ತು.

LEAVE A REPLY

Please enter your comment!
Please enter your name here