ಪುತ್ತೂರು; ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2015 ರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಪ್ರಥಮವಾಗಿ ರಚನೆಗೊಂಡು, ದೇವಸ್ಥಾನದಲ್ಲಿ ಸಕ್ರೀಯವಾಗಿ ಭಜನೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಈಗ ಶ್ರೀಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಆಗಿ ನೋಂದಾಯಿತಗೊಂಡಿದೆ.
ನೂತನ ಟ್ರಸ್ಟ್‌ಗೆ 12 ಮಂದಿ ಟ್ರಸ್ಟಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಟ್ರಸ್ಟ್‌ನ ಆಡಳಿತ ನಿರ್ದೇಶಕರಾಗಿ ಗೋಪಾಲಕೃಷ್ಣ ಯಂ.ಎ., ಟ್ರಸ್ಟಿಗಳಾಗಿ ದಿವಾಕರ ಶೆಟ್ಟಿ, ಜಗನ್ನಾಥ ಪೂಜಾರಿ, ಧನುಶಾ ಎನ್.ಎಸ್., ಪಕೀರ ಗೌಡ, ಕವಿತಾ ದಿನಕರ್, ಮೋಹಿನಿ ದಿವಾಕರ್, ವಿದ್ಯಾ, ಆಶಾ ಯೋಗೀಶ್, ಶಾರದಾಕೃಷ್ಣ, ಪ್ರಭಾವತಿ ಹಾಗೂ ವಿಷ್ಣುಪ್ರಭು ಟ್ರಸ್ಟಿಗಳಾಗಿ ಆಯ್ಕೆಯಾಗಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಸಂಜೆಯ ವೇಳೆಯಲ್ಲಿ ಭಜನಾ ಸೇವೆ ನಡೆಸಿಕೊಂಡು ಬರುತ್ತಿರುವುದಲ್ಲದೆ ಕಾಶಿ, ಗೋಕರ್ಣ, ಮಂತ್ರಾಲಯ ಸ್ಥಳೀಯ ದೇವಸ್ಥಾನಗಳಲ್ಲಿ, ದೈವಸ್ಥಾನಗಳಲ್ಲಿ, ಕಟೀಲು, ಪೊಳಲಿ, ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ ಗಣೇಶೋತ್ಸವ, ನವರಾತ್ರಿ, ಶಿವರಾತ್ರಿ ಸಂದರ್ಭಗಳಲ್ಲಿ, ಭಕ್ತಾದಿಗಳ ಅಪೇಕ್ಷೆಯಂತೆ ಗೃಹಪ್ರವೇಶ ಕಾರ್ಯಕ್ರಮಗಳಲ್ಲಿ ಹಾಗೂ ದೇವಸ್ಥಾನದ ಮುಂಭಾಗದಲ್ಲಿರುವ ಧ್ಯಾನರೂಢ ಶಿವ ದೇವರ ಬಳಿ ಏಕಾಹ ಭಜನಾ ಸೇವೆ ನೀಡುತ್ತಾ ಬರುತ್ತಿದೆ. ಭಜನೆಯ ಜೊತೆಗೆ ಸ್ವಚ್ಛತಾ ಆಂದೋಲನ, ಅಶಕ್ತರಿಗೆ ನೆರವಾಗುವ ರೀತಿಯಲ್ಲಿ ಸಾಮೂಹಿಕವಾಗಿ ಧನಸಂಗ್ರಹಣೆ ಹಾಗೂ ವಿತರಣೆ ಸೇವೆ ನಡೆಸುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್‌ನ ಮುಖಾಂತರ ಧಾರ್ಮಿಕ, ಸಾಮಾಜಿಕ ಸೇವೆ ನೀಡುತ್ತಾ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳಾದ ಸ್ವಚ್ಛತಾ ಆಂದೋಲನ, ರಕ್ತದಾನ ಶಿಬಿರ, ಬಡ ಜನತೆಗೆ ಅಶಕ್ತರಿಗೆ ಧನ ಸಹಾಯ ಸಮಾಜ ಸೇವಾ ಕಾರ‍್ಯಗಳನ್ನು ನಡೆಸುವ ದೃಷ್ಠಿಕೋನದಿಂದ ಟ್ರಸ್ಟ್‌ನ್ನಾಗಿ ನೊಂದಾಯಿಸಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.