ಗಂಡಿಬಾಗಿಲು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ

0

೦ ಡಾ. ಶಾಹ್ ಮುಸ್ಲಿಯಾರ್ ಮಕ್ಬರ ಕಟ್ಟಡ ಉದ್ಘಾಟನೆ

೦ ಏಕದಿನ ಮತ ಪ್ರಭಾಷಣ

೦ ಅಲ್ಲಾಹುವಿನ ಸೇವೆಯಿಂದ ಅನುಗ್ರಹ ಪ್ರಾಪ್ತಿ-ಝೈನುಲ್ ಆಬಿದೀನ್ ತಂಙಳ್

ಉಪ್ಪಿನಂಗಡಿ: ಗಂಡಿಬಾಗಿಲು ಎಸ್.ಕೆ.ಎಸ್.ಎಸ್.ಎಫ್. ಶಾಖೆ ಆಶ್ರಯದಲ್ಲಿ ಕುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಮತ್ತು ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್‌ನ ಸಹಕಾರದೊಂದಿಗೆ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಮತ್ತು ಡಾ. ಕೆ.ಎಂ. ಶಾಹ್ ಉಸ್ತಾದ್‌ರವರ ಮಕ್ಬರ ಕಟ್ಟಡ ಉದ್ಘಾಟನೆ ಹಾಗೂ ಏಕದಿನ ಮತ ಪ್ರಭಾಷಣ ಕಾರ್‍ಯಕ್ರಮ ಗಂಡಿಬಾಗಿಲು ಮಸೀದಿ ವಠಾರದಲ್ಲಿ ಡಿ. 26 ರಂದು ನಡೆಯಿತು.


ಕಾರ್‍ಯಕ್ರಮದಲ್ಲಿ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಗೌರವಾಧ್ಯಕ್ಷ ಸಯ್ಯದ್ ಝೈನುಲ್ ಆಬಿದಿನ್ ತಂಙಳ್ ದುಗ್ಗಲಡ್ಕರವರು ಮಕ್ಬರ ಕಟ್ಟಡ ಉದ್ಘಾಟಿಸಿ, ದುವಾಃ ನೆರವೇರಿಸಿ ಮಾತನಾಡಿ ನಾವು ಎಷ್ಟು ಅಲ್ಲಾಹುವಿನ ಸೇವೆ ಮಾಡುತ್ತೇವೆಯೋ ಅಷ್ಟೂ ಆತನ ಸಂಪ್ರೀತಿ, ಅನುಗ್ರಹ ದೊರಕುತ್ತದೆ, ಆ ಮೂಲಕ ನಾವು ಸಮಾಜದಲ್ಲಿಯೂ ಗುರುತಿಸಲ್ಪಡುತ್ತೇವೆ ಎಂದ ಅವರು ಈ ಊರಿನವರಾದ ಡಾ. ಶಾಹ್ ಮುಸ್ಲಿಯಾರ್‌ರವರು ನಮ್ಮ ರಾಜ್ಯ ಕಂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ಅವರು ಕೇವಲ ಓರ್ವ ಉಲೇಮಾ, ವಾಗ್ಮಿಯಾಗಿ ಗುರುತಿಸಲ್ಪಟ್ಟವರಲ್ಲ, ಅವರು ಓರ್ವ ಪತ್ರಕರ್ತನಾಗಿ, ಬರಹಗಾರನಾಗಿ, ಸಮಾಜಮುಖಿ ಚಿಂತಕನಾಗಿಯೂ ಗುರುತಿಸಲ್ಪಟ್ಟವರಾಗಿದ್ದು, ಅವರ ಸರಳ ಜೀವನ ಶೈಲಿ ಮತ್ತು ಅವರ ತತ್ವ ಆದರ್ಶಗಳು ನಮಗೆ ಮಾದರಿ ಎಂದರು.

ಕೆಮ್ಮಾರ ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮಹಮ್ಮದ್ ದಾರಿಮಿ ಮಾತನಾಡಿ ಉಲೇಮಾಗಳಿಂದಾಗಿ ನಮ್ಮ ನೆಲೆ ನಿಂತಿದ್ದು, ಈ ಹಿನ್ನೆಲೆಯಲ್ಲಿ ಮತಾಂಧ, ಸಮಾಜಕಂಠಕ ಶಕ್ತಿಗಳಿಗೆ ಇಂದು ಉಲೇಮಾಗಳೇ ಗುರಿ ಆಗುತ್ತಿದ್ದಾರೆ, ಈ ನಿಟ್ಟಿನಲ್ಲಿ ನಾವುಗಳು ಓದು, ಬರಹದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದ ಅವರು ಶಾಹ್ ಮುಸ್ಲಿಯಾರ್‌ರವರು ಸಮುದಾಯ ಎದುರಾಗುತ್ತಿದ್ದ ಸಂಕಷ್ಟಗಳ ಬಗ್ಗೆಯೂ ಬರೆಯುವ ಮೂಲಕ ಮೇರು ವ್ಯಕ್ತಿಯಾಗಿ ಬಿಂಬಿತರಾಗಿದ್ದರು ಎಂದರು.


ಕರ್ವೇಲು ಜುಮಾ ಮಸೀದಿ ಖತೀಬ್ ಸಯ್ಯದ್ ಅನಸ್ ತಂಙಳ್ ಅಝ್‌ಹರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಆರಂತೋಡು ಮಸೀದಿ ಖತೀಬ್ ಹಾಜಿ ಇಸಾಕ್ ಬಾಖಾವಿ, ಆರಂತೋಡು ಜುಮಾ ಮಸೀದಿ ಅಧ್ಯಕ್ಷ ಹಾಜಿ ಎ. ಅಶ್ರಫ್ ಗುಂಡಿ, ಕೆಮ್ಮಾರ ಮಸೀದಿ ಖತೀಬ್ ವಿ.ಎಂ. ಅಬೂಬಕ್ಕರ್ ಸಖಾಫಿ ಅಲ್ ಬುರ್ಖಾನಿ, ಕುದ್ಲೂರು ಮಸೀದಿ ಖತೀಬ್ ಖಲಂದರ್ ಶಾಫಿ ಮದನಿ ಮಾತನಾಡಿ ಡಾ. ಶಾಹ್ ಮುಸ್ಲಿಯಾರ್ ಜೀವನ ಪದ್ಧತಿ ಮತ್ತು ಅವರು ಸಮಾಜಕ್ಕೆ ಬಿಟ್ಟು ಹೋಗಿರುವ ತತ್ವ ಅದರ್ಶಗಳ ಬಗ್ಗೆ ತಿಳಿಸಿದರು.

ಅನುಸ್ಮರಣೆ, ಸನ್ಮಾನ ಕಾರ್‍ಯಕ್ರಮ:
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಮತ್ತು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾಗಿರುವ ಉಸ್ಮಾನ್ ಫೈಝಿ ತೋಡಾರು ಉಸ್ತಾದ್‌ರವರಿಗೆ ಗೌರವ ಅರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಪುತ್ತೂರು ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಿಕ್ ನೀರಾಜೆ ಮತ್ತು ಕಾರ್‍ಯದರ್ಶಿಯಾಗಿ ಆಯ್ಕೆಯಾಗಿರುವ ನಝೀರ್ ಕೊಲ ಇವರಿಗೆ ಸನ್ಮಾನ ನಡೆಯಿತು.

ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ, ಹುಸೈನ್ ದಾರಿಮಿ ರೆಂಜಲಾಡಿ, ತೆಕ್ಕಿಲ್ ಗ್ರಾಮೀಣ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್, ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಕೆ.ಎಸ್. ಅಬ್ದುಲ್ ಹಮೀದ್ ಸೌಕತ್ ಫೈಝಿ ಸಂದರ್ಭೋಚಿತವಾಗಿ ಮಾತನಾಡಿದರು. ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಮಂಜೇಶ್ವರ ಇವರು ಧಾರ್ಮಿಕ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಹಿರಿಯರಾದ ಅಬ್ದುಲ್ ರಹಿಮಾನ್ ಹಾಜಿ ಬಡ್ಡಮೆ, ಡಾ. ಶಾಹ್ ಮುಸ್ಲಿಯಾರ್ ಕುಟುಂಬ ಸದಸ್ಯರಾದ ಶರೀಫ್ ಆರಂತೋಡು, ಸಿರಾಜುದ್ದೀನ್ ಆತೂರು, ಆತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಜಾಕ್, ಆತೂರು ಮಸೀದಿ ಮಾಜಿ ಅಧ್ಯಕ್ಷ ಬಿ.ಕೆ. ಮಹಮ್ಮದ್ ಹಾಜಿ, ಕೆಮ್ಮಾರ ಮಸೀದಿ ಅಧ್ಯಕ್ಷ ರಶೀದ್ ಹಾಜಿ ಬಡ್ಡಮೆ, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಆದಂ ಹಾಜಿ ಬಡ್ಡಮೆ, ಕಾರ್‍ಯದರ್ಶಿ ಎಸ್. ಆದಂ ಹಾಜಿ, ಸ್ವಾಗತ ಸಮಿತಿ ಅಧ್ಯಕ್ಷ ಹಸೈನಾರ್ ಹಾಜಿ ಕೊಲ, ಯೂಸುಫ್ ಅಲ್‌ಖಾಸಿಮಿ ಗಂಡಿಬಾಗಿಲು, ಕೆಮ್ಮಾರ ಮದ್ರಸ ಸಮಿತಿ ಅಧ್ಯಕ್ಷ ಎನ್.ಎ. ಇಸಾಕ್, ನೀರಾಜೆ ಮದ್ರಸ ಅಧ್ಯಕ್ಷ ನಝೀರ್, ಆರಂತೋಡು ಮಸೀದಿ ಕಾರ್‍ಯದರ್ಶಿ ಕೆ.ಎಂ. ಮೂಸಾನ್, ಆರಂತೋಡು ಯಂಗ್‌ಮೆನ್ಸ್ ಅಧ್ಯಕ್ಷ ಅಬ್ದುಲ್ ಮಜೀದ್, ಆಶಿಕ್ ಕುಕ್ಕುಂಬಳ, ಸೈಫುದ್ದೀನ್ ಪಟೇಲ್, ಅಬ್ದುಲ್ ಖಾದರ್ ಪಟೇಲ್, ಅಮೀರ್ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್. ವಿಕಾಯ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ತಂಙಳ್, ಸಿದ್ದಿಕ್ ಫೈಝಿ ಆತೂರು, ರಾಜ್ಯ ಸಮಿತಿ ಸದಸ್ಯ ಎನ್. ಸಿದ್ದಿಕ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಗಂಡಿಬಾಗಿಲು ಮದ್ರಸದ ಸದರ್ ಮುಅಲ್ಲಿಂ ಕೆ.ಎಂ. ಅಬ್ದುಲ್ ರಹಿಮಾನ್ ಫೈಝಿ ಕೊಂತೂರು ಸ್ವಾಗತಿಸಿ, ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಘಟಕದ ಅಧ್ಯಕ್ಷ ಜಿ. ಮಹಮ್ಮದ್ ರಫೀಕ್ ವಂದಿಸಿದರು. ಕಾರ್‍ಯದರ್ಶಿ ಝಿಯಾದ್, ಕೋಶಾಧಿಕಾರಿ ಕೆ.ಕೆ. ಜಲೀಲ್, ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಲತೀಫ್ ಪಿ., ಇಸಾಕ್ ಬೊಲುಂಬುಡ, ಮಹಮ್ಮದ್ ಆಲಿ, ಅನ್ಸಾರ್ ಎಸ್.ಪಿ., ಸಿದ್ದಿಕ್ ಎಸ್. ಅಬ್ದುಲ್ ರಜಾಕ್ ಮರ್‍ವೇಲ್, ಎಸ್. ಅಬ್ದುಲ್ ರಹಿಮಾನ್, ಆಶಿಫ್, ನಿಸಾರ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ರಫೀಕ್ ಗೋಳಿತ್ತಡಿ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here