ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇವರು ನವೆಂಬರ್ ತಿಂಗಳಿನಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಶೇ.100 ಫಲಿತಾಂಶ ಪಡೆದು ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದೆ.
ಹೈಯರ್ ವಿಭಾಗದಲ್ಲಿ ಅಗಮ್ಯ 549/600ಅಂಕ (ಗಣೇಶ್ ಆಚಾರ್ಯ ಮಂಜುಳಾ ದಂಪತಿ ಪುತ್ರಿ)ಪ್ರಥಮ ಸ್ಥಾನ, ಅವನಿ 526/600ಅಂಕ (ಗಂಗಾಧರ ಬೆಳ್ಳಾರೆ ಮತ್ತು ಆಶಾ ಬೆಳ್ಳಾರೆ ದಂಪತಿ ಪುತ್ರಿ)ದ್ವಿತೀಯ ಸ್ಥಾನ, ಶ್ರೀಶ ನಿಡ್ವಣ್ಣಾಯ 509/600ಅಂಕ (ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮ ನೂಜಾಜೆ ದಂಪತಿ ಪುತ್ರ)ತೃತೀಯ ಸ್ಥಾನ ಪಡೆದಿರುತ್ತಾರೆ.
41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೩೦ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಲೋವರ್ ವಿಭಾಗದಲ್ಲಿ ಪೂಜಾ 531/600ಅಂಕ (ಸುರೇಶ್ ಮತ್ತು ವನಿತಾ ದಂಪತಿ ಪುತ್ರಿ)ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 4ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.