ಗೃಹ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

0

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಉಪ್ಪಿನಂಗಡಿ ಗೃಹ ರಕ್ಷಕರ ಘಟಕದಲ್ಲಿ ಖಾಲಿ ಇರುವ ಪುರುಷರ ಸ್ವಯ ಸೇವಾ ಗೃಹರಕ್ಷಕರ (ಹೋಂ ಗಾರ್ಡ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಉಪ್ಪಿನಂಗಡಿ ಸಮೀಪದ ಆಸುಪಾಸಿನ ಹುಡುಗರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿದಾರರು 19 ವರ್ಷ ಮೇಲ್ಪಟ್ಟವರಾಗಿರಬೇಕಾಗಿದ್ದು, ಎಸೆಸ್ಸೆಲ್ಸಿ ಪಾಸಾಗಿರಬೇಕು. 168 ಸೆಂ. ಮೀ. ಎತ್ತರ ಹಾಗೂ ಕನಿಷ್ಠ 50 ಕೆ.ಜಿ. ತೂಕವನ್ನು ಹೊಂದಿರಬೇಕು.

ಯಾವುದೇ ಅಂಗ ನ್ಯೂನತೆಗಳನ್ನು ಹೊಂದಿರಬಾರದು. ಸ್ವಯಂ ಸೇವಾ ಆಸಕ್ತಿ ಇರುವವರಿಗೆ ಮೊದಲ ಆದ್ಯತೆಯಾಗಿದ್ದು, ಉದ್ಯೋಗದಲ್ಲಿರುವವರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಸರಕಾರ ನಿಗದಿ ಪಡಿಸಿದ ಅರ್ಜಿಯನ್ನು ದಿನಾಂಕ 1/1/2023ರಂದು ಬೆಳಗ್ಗೆ 9ರಿಂದ ಸಂಜೆ ೪ರವರೆಗೆ ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಮೀಪವಿರುವ ಅಂಗನವಾಡಿ ಬಳಿಯ ಘಟಕದ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿ ಅಲ್ಲಿಗೆ ನೀಡಬೇಕು. ಹೆಚ್ಚಿನ ಮಾಹಿತಿಗೆ  8095642480 ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here