ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಸುಬ್ರಹ್ಮಣ್ಯ ವಿದ್ಯಾಲಯದ ಎನ್.ಎಸ್.ಎಸ್ ಶಿಬಿರ ಉದ್ಘಾಟನೆ

0

ಆಲಂಕಾರು: ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ದುರ್ಗಾಂಬಾ ಪದವಿಪೂರ್ವ ಕಾಲೇಜು ಅಲಂಕಾರಿನಲ್ಲಿ ನಡೆಯಿತು.


ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಿಂಗಯ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕಾರ್ಯದರ್ಶಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ  ವಹಿಸಿದ್ದರು .

ಕಾರ್ಯಕ್ರಮದ ಉದ್ಘಾಟನೆಯನ್ನು ಅಲಂಕಾರು  ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ  ದಯಾನಂದ ರೈ ಮನವಳಿಕೆ , ಇವರು ನೆರವೇರಿಸಿ ಶುಭಾಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ  ,ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ  ಲೋಕೇಶ್ ಎಸ್.ಆರ್ , ಅಧ್ಯಕ್ಷರು  ಗ್ರಾಮ ಪಂಚಾಯತ್ ಅಲಂಕಾರು ಸದಾನಂದ ಆಚಾರ್ಯ,ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥ್ ಶೆಟ್ಟಿ  , ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ  , ಅಲಂಕಾರು  ವ್ಯವಸ್ಥಾಪನ ಸಮಿತಿ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ  ದಾಮೋದರ ಗೌಡ, ಅಲಂಕಾರು ಸಿಎ ಬ್ಯಾಂಕ್ ಅಧ್ಯಕ್ಷ ಧರ್ಮ ಪಾಲ ,  ಅಲಂಕಾರು  ಮೂರ್ತೆದಾರರ ಸಹಕಾರ ಸಂಘ ಅಧ್ಯಕ್ಷ ಮುತ್ತಪ್ಪ ಪೂಜಾರಿ , ಅಲಂಕಾರು ಶ್ರೀ ವಿದ್ಯಾವರ್ಧಕ ಸಂಘದ ಸದಸ್ಯ  ವಿಜಯಕುಮಾರ್ ರೈ ಮನವಳಿಕೆ , ಲತನ್ ರೈ ಗುತ್ತುಪಾಲು ವಕೀಲರು ಅಲಂಕಾರು, ಅಲಂಕಾರು  ಸಿಎ ಬ್ಯಾಂಕ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪಗೌಡ , ಅಲಂಕಾರು  ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನವೀನ್ ರೈ,  ಉದ್ಯಮಿಗಳು ಹಾಗೂ ದುರ್ಗಂಬಾ ಆಡಳಿತ ಮಂಡಳಿ ಸದಸ್ಯ ಹೇಮಂತ್ ರೈ ಮನವಳಿಕೆ , ಮುಖ್ಯ ಗುರುಗಳು ಶ್ರೀಪತಿ ರಾವ್ ಎಚ್,   ಶಿಕ್ಷಕ ರಕ್ಷಕ ಸಂಘ ಕೆಎಸ್ಎಸ್ ಕಾಲೇಜು ಸುಬ್ರಮಣ್ಯ ಅಧ್ಯಕ್ಷ  ಆನಂದ ಎಚ್ .ಟಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕೆ .ಎಸ್.ಎಸ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಆರತಿ ಕೆ. ಸ್ವಾಗತಿಸಿ. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಮಿತಾ ಎಂ ಎ ಧನ್ಯವಾದಗೈದು  ಭಕ್ತಿ ಶ್ರೀ ಕಾರ್ಯಕ್ರಮ ನಿರೂಪಿಸಿ. ರಾಷ್ಟ್ರೀಯ ಸೇವಾ ನಾಯಕರುಗಳಾದ ತರುಣ್ ಎಸ್ , ಸುಪ್ರೀತ್ ಕೆ ಎಸ್, ನಮಿತಾ ಕೆ, ವೈಷ್ಣವಿ ಕೆ .ಸಹಕರಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಡಿ.27 ರಿಂದ ಜ 2. ರವರೆಗೆ ದುರ್ಗಾಂಬಾ ಪದವಿಪೂರ್ವ ಕಾಲೇಜು ಅಲಂಕಾರಿನಲ್ಲಿ ಎನ್.ಎಸ್.ಎಸ್ ಶಿಭಿರವು ನಡೆಯಲಿದೆ.

LEAVE A REPLY

Please enter your comment!
Please enter your name here