ಪುತ್ತೂರು ತುಳುಕೂಟೊದಿಂದ ತುಳುವರ ಸಮ್ಮೇಳನದ ಪ್ರಯುಕ್ತ ಸಾರ್ವಜನಿಕರಿಗೆ ಸ್ಪರ್ಧೆಗಳು

0

ಪುತ್ತೂರು: ಜನವರಿ ತಿಂಗಳಲ್ಲಿ ಜರಗಲಿರುವ ತುಳುಕೂಟೊ ಪುತ್ತೂರು ಇದರ ಸುವರ್ಣ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಪುತ್ತೂರು ತಾಲೂಕು ತುಳುವರ ಸಮ್ಮೇಳನದ ಪ್ರಯುಕ್ತ ಸಾರ್ವಜನಿಕರಿಗೆ ತುಳು ಭಾಷೆ, ಸಾಹಿತ್ಯ, ಸಂಗೀತ ಹಾಗೂ ಚಿತ್ರಕಲೆಗಳ ಸ್ಪರ್ಧೆ ಜರಗಲಿದೆ.

12 ವರ್ಷದ ಕೆಳಗಿನ ಮಕ್ಕಳಿಗೆ, 12 ರಿಂದ 18 ವರ್ಷದೊಳಗಿನ ಯುವಜನರಿಗೆ ಮತ್ತು 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ತುಳು ಜನಪದ ನಲಿಕೆ, ತುಳು ಗಾಯನ, ಚಿತ್ರ ಬಿಡಿಸುವುದು ಮತ್ತು ಸ್ಥಳದಲ್ಲೇ ತುಳು ಕವಿತೆ ರಚನೆ ಅಲ್ಲದೆ 18 ಮೇಲ್ಪಟ್ಟ ಮಹಿಳೆಯರಿಗೆ ತುಳು ಭಜನಾ ಸ್ಪರ್ಧೆಯೂ ಇರಲಿದೆ.

ಜ.1 ರಂದು ಬೆಳಗ್ಗೆ ಗಂಟೆ 9 ರಿಂದ ಕೊಂಬೆಟ್ಟು ರಾಮಕೃಷ್ಣ ಹೈಸ್ಕೂಲ್‌ನಲ್ಲಿ ಸ್ಪರ್ಧೆಗಳು ಜರಗಲಿದೆ.

ವಿವರಗಳಿಗೆ ಡಾ. ರಾಜೇಶ್ ಬೆಜ್ಜಂಗಳ – 9448732414, ನಯನಾ ರೈ – 8970519817, ಹೀರಾ ಉದಯ್ – 9481887577, ಸಂಪರ್ಕಿಸಬಹುದು ಎಂದು ತುಳುಕೂಟೊ ಪುತ್ತೂರು ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here