ರಾಜ್ಯ ಕಾರ್ಮಿಕ ಪರಿಷತ್ತು ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಾಗಿ ಜಾಬೀರ್ ಆತ್ತಾಸ್ ನೇಮಕ

0

ಪುತ್ತೂರು : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಾಗಿ ಜಾಬೀರ್ ಅತ್ತಾಸ್ ನೇಮಕಗೊಂಡಿದ್ದಾರೆ.

ಕಡಬ ತಾಲೂಕು ಬೆಳಂದೂರು ಅತ್ತಾಸ್ ನಿವಾಸಿ ಅಬ್ದುಲ್ಲ ಹಾಗೂ ಕುಂಞಲಿಮ್ಮ ದಂಪತಿ ಪುತ್ರರಾದ ಇವರು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ಬೆಂಗಳೂರು ನಗರ ಅಧ್ಯಕ್ಷರಾಗಿ, ರಾಜ್ಯ ಕಾರ್ಯಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಇವರನ್ನು ಕಾರ್ಮಿಕ ಪರಿಷತ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ರಾಜ್ಯ ಕಾರ್ಮಿಕ ಪರಿಷತ್ತು ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರ್‌ರವರು ಆಯ್ಕೆ ಪ್ರಮಾಣ ಪತ್ರ ನೀಡಿ ಮಾತನಾಡಿ ಜಾಬೀರ್ ಅತ್ತಾಸ್‌ರವರು ಕಾರ್ಮಿಕರ ಹಿತ ಕಾಯುವಲ್ಲಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ವರ್ಗದ ಕಾರ್ಮಿಕರ ಪರವಾಗಿ ನಿಂತು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಕಾರ್ಮಿಕ ಪರ ನಿಂತ ಇವರ ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ ಎಂದು ಹೇಳಿ ಕಾರ್ಮಿಕ ಪರಿಷತ್ ವತಿಯಿಂದ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾಬೀರ್ ಅತ್ತಾಸ್‌ರವರು ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಜನರ ಸೇವೆ ಮಾಡಲು ಸಾಧ್ಯವಾಯಿತು ನಾನು ಸದಾ ಕಾರ್ಮಿಕ ಪರಿಷತ್‌ಗೆ ಚಿರಋಣಿ ಅಲ್ಲದೆ ನೊಂದವರಿಗೆ ಶೋಷಿತರಿಗೆ ಕಾರ್ಮಿಕ ವರ್ಗಕ್ಕೆ ಯಾವುದೇ ರೀತಿಯ ತೊಂದರೆ ಆದರೂ ಎಂತಹ ಕಠಿಣ ಹೋರಾಟಕ್ಕೂ ನಾವು ಸಿದ್ಧ ದುಡಿದು ತಿನ್ನುವ ವರ್ಗವನ್ನು ಹಿಂಸಿಸುವ ಯಾರೇ ಆಗಲಿ ಅವರಿಗೆ ಶಿಕ್ಷೆ ಕೊಡಿಸುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿದರು.

ಸುವರ್ಣ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಣಿಕಂಠ, ಕ್ರೈಂ ಫೈಲ್ ಪತ್ರಿಕೆಯ ಸಂಪಾದಕ ಅಮಿತ್ ಗೋವಿಂದ್, ನ್ಯಾಷನಲ್ ಅವಾರ್ಡ್ ವಿಜೇತ ಗಂಗಾಧರ್, ಕಾರ್ಮಿಕ ಪರಿಷತ್ ಬೆಂಗಳೂರು ನಗರ ಕಾರ್ಯದರ್ಶಿ ಹರೀಶ್, ಕಚೇರಿ ಕಾರ್ಯನಿರ್ವಹಣಾಧಿಕಾರಿ ಉಮಾ ಅಂಚೆಪಾಳ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here